ಆಪ್ತ ಸ್ನೇಹಿತನಿಂದಲೇ ಯುವಕನ ಕೊಲೆ

ತಿರುವನಂತಪುರ: ಆಪ್ತ ಸ್ನೇಹಿತನೇ ಯುವಕನನ್ನು ಇರಿದು ಕೊಲೆಗೈದ ಭೀಕರ ಕೃತ್ಯ ತಿರುವನಂತಪುರದ ಕಮಲೇಶ್ವರಂ ಎಂಬಲ್ಲಿ ನಡೆದಿದೆ. ಕಮಲೇಶ್ವರಂ ನಿವಾಸಿ ಸುಜಿತ್ ಎಂಬವರು ಕೊಲೆಗೀಡಾದ ವ್ಯಕ್ತಿ. ಈ ಸಂಬಂಧ ಸುಜಿತ್‌ರ ಸ್ನೇಹಿತ ಜಯನ್ ಪೂಂದುರ ಎಂಬಾತನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಮದ್ಯಪಾನ ವೇಳೆ ಉಂಟಾದ ತರ್ಕವೇ ಕೊಲೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಘಟನೆ ಬಳಿಕ ಆರೋಪಿಯೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.

Leave a Reply

Your email address will not be published. Required fields are marked *

You cannot copy content of this page