ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಶೋಧ: ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷ ಸಹಿತ 5 ಮಂದಿ ವಿರುದ್ಧ ಮತ್ತೊಂದು ಕೇಸು ದಾಖಲು
ಕುಂಬಳೆ: ಆರಿಕ್ಕಾಡಿ ಕೋಟೆಗೆ ಅನಧಿಕೃತವಾಗಿ ನುಗ್ಗಿ ನಿಧಿ ಶೋಧ ನಡೆಸುತ್ತಿದ್ದ ವೇಳೆ ನಾಗರಿಕರು ಹಿಡಿ ದಿಟ್ಟು ಪೊಲೀಸರಿಗೆ ಹಸ್ತಾಂತರಿಸಿದ ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾ ಯತ್ ಉಪಾಧ್ಯಕ್ಷನ ಸಹಿತ ಐದು ಮಂದಿ ವಿರುದ್ಧ ಪೊಲೀಸರು ಇನ್ನೊಂದು ಕೇಸು ದಾಖಲಿಸಿಕೊಂ ಡಿದ್ದಾರೆ. ಪ್ರಾಚ್ಯವಸ್ತು ಇಲಾಖೆಯ ದೂರಿನಂತೆ ಕೇಸು ದಾಖಲಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪ್ರಾಚ್ಯವಸ್ತು ಇಲಾಖೆಯ ನಿಯಂ ತ್ರಣದಲ್ಲಿರುವ ಆರಿಕ್ಕಾಡಿ ಕೋಟೆಗೆ ಅತಿಕ್ರಮಿಸಿ ಶೋಧ ನಡೆಸಲಾಯಿ ತೆಂಬ ಆರೋಪದಂತೆ ಕೇಸು ದಾಖಲಿಸಲಾಗಿದೆ. ಕೋಟಯಂ ಗೈಡ್ ಚೆಂಬೇರಿ ವೇಲಾಯಿ ಕುಳಿ ನಿವಾಸಿ ನಿಶಾಂತ್ ಕುಮಾರ್ ನೀಡಿದ ದೂರಿನಂತೆ ನಿನ್ನೆ ಸಂಜೆ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷ ಮುಜೀಬ್ ಕಂಬಾರು (46), ಪೊವ್ವಲ್‌ನ ಮುಹಮ್ಮದ್ ಫಿರೋಸ್ (28), ಮೊಗ್ರಾಲ್ ಪುತ್ತೂರಿನ ಜಾಫರ್ (26), ಪಾಲಕುನ್ನುವಿನ ಅಜಾಸ್ (26), ನೀಲೇಶ್ವರ ಬಂಗಳದ ಸಹದುದ್ದೀನ್ (26) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಐದು ಮಂದಿ ಮೊನ್ನೆ ಮಧ್ಯಾಹ್ನ ಆರಿಕ್ಕಾಡಿ ಕೋಟೆಯೊಳಗಿನ ಬಾವಿಯಲ್ಲಿ ನಿಧಿಯಿದೆ ಎಂಬ ಸಂಶಯದ ಮೇರೆಗೆ ಶೋಧ ಆರಂಭಿಸಿದ್ದರು.
ವಿಷಯ ತಿಳಿದು ಸ್ಥಳಕ್ಕೆ ತಲುಪಿದ ನಾಗರಿಕರು ನಿಧಿ ಶೋಧ ನಡೆಸಿದ ತಂಡವನ್ನು ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು.