ಆರಿಕ್ಕಾಡಿ ಕೋಟೆಯಲ್ಲಿ ನಿಧಿ ಶೋಧ: ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷ ರಾಜೀನಾಮೆ ಆಗ್ರಹಿಸಿ ಎಡರಂಗದಿಂದ ಮಾರ್ಚ್
ಮೊಗ್ರಾಲ್ ಪುತ್ತೂರು: ಕುಂಬಳೆ ಆರಿಕ್ಕಾಡಿ ಕೋಟೆಗೆ ಅತಿಕ್ರಮಿಸಿ ನುಗ್ಗಿ ನಿಧಿ ಶೋಧಕ್ಕೆ ನೇತೃತ್ವ ನೀಡಿದ, ಪೊಲೀಸರ ವಶದಲ್ಲಾದ ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷ ಮುಜೀಬ್ ಕಂಬಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಎಡರಂಗ ಮೊಗ್ರಾಲ್ ಪುತ್ತೂರು ಪಂಚಾಯತ್ ಕಚೇರಿಗೆ ನಡೆಸಿದ ಮಾರ್ಚನ್ನು ಐಎನ್‌ಎಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಸೀಸ್ ಕಡಪ್ಪುರ ಉದ್ಘಾಟಿಸಿದರು.
ಎಡರಂಗದ ಸಂಚಾಲಕ ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದರು. ಸಿಪಿಎಂ ಏರಿಯಾ ಕಾರ್ಯದರ್ಶಿ ಟಿಎಂಎ ಕರೀಂ, ಏರಿಯಾ ಸಮಿತಿ ಸದಸ್ಯ ಎಂ.ಕೆ. ರವೀಂದ್ರನ್, ಕಲೀಲ್ ಎರಿಯಾಲ್, ಕೆ. ಕುಂಞಿರಾಮನ್, ಹನೀಫ್ ಕಡಪ್ಪುರ, ಸಫೀರ್ ಗುಲ್ಸಾರ್, ಎ.ಪಿ. ರಫೀಕ್, ಶುಕೂರ್, ಕೆ. ಇಂದಿರ ಮೊದಲಾದವರು ಭಾಗವಹಿಸಿದರು.