ಆರಿಕ್ಕಾಡಿ ಕೋಟೆಯೊಳಗೆ ನಿಧಿ ಶೋಧ: ಮೊಗ್ರಾಲ್ ಪುತ್ತೂರು ಪಂ. ಉಪಾಧ್ಯಕ್ಷ ಸಹಿತ ಐದು ಮಂದಿ ಬಂಧನ
ಕುಂಬಳೆ: ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರ ಸಮೀಪವಿರುವ ಆರಿಕ್ಕಾಡಿ ಕೋಟೆಯೊಳಗಿನ ಬಾವಿಯಲ್ಲಿ ನಿಧಿ ಶೋಧ ನಡೆಸಿದ ಐದು ಮಂದಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಮೊಗ್ರಾಲ್ ಪುತ್ತೂರು ಪಂಚಾಯತ್ ಉಪಾಧ್ಯಕ್ಷ ಮುಜೀಬ್ ರಹ್ಮಾನ್ ಯಾನೆ ಮುಜೀಬ್ ಕಂಬಾರ್ (46), ಪೊವ್ವಲ್ ನಿವಾಸಿ ಮೊಹಮ್ಮದ್ ಫಿರೋಸ್ (28), ಮೊಗ್ರಾಲ್ ಪುತ್ತೂರಿನ ಜಾಫರ್ (26), ಪಾಲಕುನ್ನುವಿನ ಅಜಾಸ್ (26), ನೀಲೇಶ್ವರ ಬಂಗಳದ ಸಹದದ್ದೀನ್ (26) ಎಂಬಿವರು ಬಂಧಿತರಾದ ಆರೋಪಿಗಳಾಗಿದ್ದಾರೆಂದು ಪೊಲೀ ಸರು ತಿಳಿಸಿದ್ದಾರೆ. ಆರೋಪಿಗಳು ನಿಧಿ ಶೋಧಕ್ಕಾಗಿ ಆಗಮಿಸಿದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ನಿನ್ನೆ ಮಧ್ಯಾಹ್ನ 2 ಗಂಟೆಗೆ ಆರೋಪಿಗಳು ಆರಿಕ್ಕಾಡಿಗೆ ತಲುಪಿ ಕೋಟೆಯೊಳಗಿನ ಬಾವಿಯಲ್ಲಿ ನಿಧಿ ಶೋಧ ಆರಂಭಿಸಿದ್ದರು. ಬಾವಿಯೊ ಳಗಿಂದ ಅಗೆಯುವ ಶಬ್ದ ಕೇಳಿ ಬಂದ ಹಿನ್ನೆಲೆಯಲ್ಲಿ ನಾಗರಿಕರು ಸ್ಥಳಕ್ಕೆ ತಲುಪಿ ನೋಡಿದಾಗ ವಿಷಯ ಅರಿವಿಗೆ ಬಂದಿದೆ. ಕೂಡಲೇ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದರು. ಇದರಂತೆ ಇನ್ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್ ಐ ಶ್ರೀಜೇಶ್ ನೇತೃತ್ವದ ಪೊಲೀಸರು ತಲುಪಿ ತಂಡವನ್ನು ಕಸ್ಟಡಿಗೆ ತೆಗೆದು ಕೊಂಡಿದ್ದಾರೆ. ಬಳಿಕ ನಡೆಸಿದ ತನಿಖೆ ಯಲ್ಲಿ ನಿಧಿ ಶೋಧ ನಡೆಯುವುದು ಖಚಿತಗೊಂಡ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದು, ನಂತರ ಜಾಮೀನಿನಲ್ಲಿ ಬಿಡುಗಡೆಮಾಡಲಾಗಿದೆ.
ನಿಧಿ ಶೋಧ ನಡೆದ ಸ್ಥಳಕ್ಕೆ ಇಂದು ಪ್ರಾಚ್ಯವಸ್ತು ಇಲಾಖೆಯವರು ತಲುಪಿ ಪರಿಶೀಲನೆ ನಡೆಸಲಿದ್ದಾರೆ. ನಿಧಿ ಶೋಧ ನಡೆದ ಸ್ಥಳ ಪ್ರಾಚ್ಯವಸ್ತು ಇಲಾಖೆಯ ದ್ದೆಂದು ಸಾಬೀತುಗೊಂ ಡರೆ ಆರೋಪಿ ಗಳ ವಿರುದ್ಧ ಜಾಮೀನು ರಹಿತ ಕೇಸು ದಾಖಲಿಸಿ ಬಂಧಿಸಲಾಗುವುದೆAದು ಪೊಲೀಸರು ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಿಂದ ಅಲ್ಪವೇ ದೂರವಿರುವ ಆರಿಕ್ಕಾಡಿ ಕೋಟೆಯೊಳಗಿನ ಬಾವಿ ಯಲ್ಲಿ ಹಾಡಹಗಲೇ ಜನಪ್ರತಿನಿಧಿ ನೇತೃತ್ವದಲ್ಲಿ ತಂಡ ನಿಧಿ ಶೋಧ ನಡೆಸಿರುವುದು ನಾಡಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.