ಆರ್ಎಸ್ಎಸ್ನಿಂದ ವಿಜಯದಶಮಿ ಪಥಸಂಚಲನ: ಸಾರ್ವಜನಿಕ ಸಭೆ
ಮಂಜೇಶ್ವರ: ರಾಷ್ಟಿçÃಯ ಸ್ವಯಂಸೇವಕ ಸಂಘ ಮಂಜೇಶ್ವರ ಖಂಡ್ ವತಿಯಿಂದ ವಿಜಯದಶಮಿ ಪ್ರಯುಕ್ತ ಪಥಸಂಚಲನ ಹಾಗೂ ಸಾರ್ವಜನಿಕ ಸಮಾರಂಭ ನಿನ್ನೆ ಬೆಳಿಗ್ಗೆ ನಡೆಯಿತು. ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಪರಿಸರದಿಂದ ಹೊರಟ ಪಥ ಸಂಚಲನ ಸಂತಡ್ಕ ಶ್ರೀ ಅರಸು ಸಂಕಲ ದೈವ ಕ್ಷೇತ್ರ ಪರಿಸರದಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ ಸಾರ್ವಜನಿಕ ಸಮಾರಂಭದಲ್ಲಿ ನಿವೃತ್ತ ಯೋಧರಾದ ಸುನಿಲ್ ಕುಮಾರ್ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಬೌಧಿಕ್ ಮಾಡಿದರು. ಆರ್.ಎಸ್.ಎಸ್ ಕಣ್ಣೂರು ವಿಭಾಗ ಕಾರ್ಯವಾಹ ಲೊಕೇಶ್ ಜೋಡುಕಲ್ಲು ಉಪಸ್ಥಿತರಿದ್ದರು. ಪಥಸಂಚಲನದಲ್ಲಿ ಸಾವಿರಾರು ಮಂದಿ ಸ್ವಯಂಸೆವಕರು ಭಾಗವಹಿಸಿದರು.