ಬದಿಯಡ್ಕ: ಆರ್ಎಸ್ಎಸ್ ನ ಹಿರಿಯ ಮುಖಂಡ, ನಿವೃತ್ತ ಅಧ್ಯಾಪಕ ಕೋರಿಕ್ಕಾರು ನಿವಾಸಿ ಮಹೇಶ್ವರ ಪ್ರಸಾದ್ (೬೭) ನಿಧನ ಹೊಂದಿದರು. ಇವರು ಪಳ್ಳತ್ತಡ್ಕದಲ್ಲಿ ಆರ್ಎಸ್ಎಸ್ ಶಾಖೆ ಆರಂಭಿಸಿ ಸ್ವಯಂ ಸೇವಕರ ತಂಡವನ್ನು ಕಟ್ಟಿದ್ದರು. ಮೃತರು ಪತ್ನಿ ಸರ್ವಮಂಗಳ, ಮಕ್ಕಳಾದ ಸುಪ್ರಭ, ಮೇಘ ಶ್ಯಾಮ್, ಅಳಿಯ ಆದರ್ಶ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.