ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶಿವಶಕ್ತಿ ಮಹಾಯಾಗ ನಾಳೆ
ಬದಿಯಡ್ಕ: ಆಲಂಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಾಳೆ ನಡೆಯಲಿರುವ ಶ್ರೀ ಶಿವಶಕ್ತಿ ಮಹಾಯಾಗದ ಪ್ರಯುಕ್ತ ನಿನ್ನೆ ಬೆಳಗ್ಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಚಂದ್ರAಪಾರೆಯಿAದ ಆರಂಭವಾದ ಮೆರವಣಿಗೆಯಲ್ಲಿ ತಾಯಂದಿರು, ಮಕ್ಕಳೂ ಪಾಲ್ಗೊಂಡಿದ್ದರು. ಯಾಗ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಮಂಗಳೂರು, ಪ್ರಧಾನ ಸಂಚಾಲಕ ಪಿ.ಆರ್.ಸುನಿಲ್, ಪುರುಷೋತ್ತಮ ಪುಣಿಂಚಿತ್ತಾಯ ನೀರ್ಮಜೆ, ಸೀತಾರಾಮರಾವ್ ಪಿಲಿಕೂಡ್ಲು, ರವಿಶಂಕರ್ ಪುಣಿಂಚಿತ್ತಾಯ, ಕುಶಾಲ್ ಯಾದವ್, ರಾಮಚಂದ್ರ, ಸೀತಾರತ್ನ, ಜಯರಾಂ ಕೋಟೂರು, ಸಂತೋಷ್ ಚಂದ್ರAಪಾರೆ, ಉಣ್ಣಿಕೃಷ್ಣನ್, ರವಿ ಚಂದ್ರAಪಾರೆ, ಶಶಿಧರನ್ ನಾಯರ್, ಟಿ.ಕೆ.ಮಾಧವನ್, ಕೃಷ್ಣೋಜಿ ಮಾಸ್ತರ್, ಸಿ.ಕೃಷ್ಣನ್ ಚಾತ್ತಪಾಡಿ, ಸುಜಾತಾ ಶಶಿಧರನ್, ನಾರಾಯಣ ಅರ್ಲಡ್ಕ, ಶಾಂತಾ ನಾರಾಯಣನ್, ದಿನೇಶ್ ಚಾಂಡಿಮೂಲ, ಭಾಸ್ಕರ ಜಾತಿಕಾಡ್ ನೇತೃತ್ವ ವಹಿಸಿದ್ದರು. ಇಂದು ಬೆಳಗ್ಗೆಯಿಂದ ಸಂಜೆ 6 ಗಂಟೆಯ ತನಕ ವಿವಿಧ ಭಜನಾ ತಂಡಗಳಿAದ ಭಜನೆ ನಡೆಯಲಿದೆ. ಸಂಜೆ 6 ಗಂಟೆಗೆ ಅರಣಿಮಥನದ ಮೂಲಕ ಹೋಮಾಗ್ನಿ ಪ್ರತಿಷ್ಠಾಪನೆ ನಡೆಯಲಿದೆ. ಸ್ಥಳೀಯ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಾಳೆ ಬೆಳಗ್ಗೆ ಗಣಪತಿ ಹೊಮದೊಂದಿಗೆ ಶಿವಶಕ್ತಿ ಮಹಾಯಾಗ ಆರಂಭವಾಗಲಿದೆ. ಬೆಳಗ್ಗೆ 10 ಗಂಟೆಗೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳ ಆಗಮನ, ಪೂರ್ಣಕುಂಭ ಸ್ವಾಗತ, ನಂತರ ನಡೆಯುವ ಧಾರ್ಮಿಕ ಸಭೆಯಲ್ಲಿ ಮಧುಸೂದನ ಅಯರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕನ್ಯಾನ ಸದಾಶಿವ ಶೆಟ್ಟಿ ಕುಳೂರು, ಕೆ.ಕೆ.ಶೆಟ್ಟಿ ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಬಳಿಕ ಅನ್ನಸಂತರ್ಪಣೆ ನಡೆಯಲಿದೆ.