ಆಲ್ ಕೇರಳ ಲೀಗಲ್ ಮೆಟ್ರೋಲಜಿ ಲೈಸನ್ಸ್‌ಡ್ ಆಂಡ್ ಎಂಪ್ಲೋಯೀಸ್ ಯೂನಿಯನ್ ಪದಾಧಿಕಾರಿಗಳು

ಕಾಸರಗೋಡು: ಆಲ್ ಕೇರಳ ಲೀಗಲ್ ಮೆಟ್ರೋಲಜಿ ಲೈಸನ್ಸ್‌ಡ್ ಆಂಡ್ ಎಂಪ್ಲೋಯೀಸ್ ಯೂನಿಯನ್ ಕಾಸರಗೋಡು ಇದರ ಸಭೆ ಕಾಞಂಗಾಡ್‌ನಲ್ಲಿ ಜರಗಿತು. ಸಭೆಯಲ್ಲಿ ಜಿಲ್ಲಾ ಸಮಿತಿ ಪದಾಧಿಕಾರಿಗಳನ್ನು  ಆಯ್ಕೆ ಮಾಡಲಾಯಿತು.  ಅಧ್ಯಕ್ಷರಾಗಿ ದಿನೇಶನ್ ಪಿ ಕಾಞಂಗಾಡ್, ಕಾರ್ಯದರ್ಶಿಯಾಗಿ  ಉದಯ ಬಿ.ಕೆ ಕಾಸರಗೋಡು, ಕೋಶಾಧಿಕಾರಿಯಾಗಿ  ಸುಬ್ರಹ್ಮಣ್ಯ ಪೈ ಬದಿಯಡ್ಕ, ಉಪಾಧ್ಯಕ್ಷರಾಗಿ ಅನಿಲ್ ಕುಮಾರ್, ಜೊತೆ ಕಾರ್ಯದರ್ಶಿಯಾಗಿ ಅನೀಶ್ ಕೆ.ವಿ  ಸಹಿತ 13 ಮಂದಿ ಸದಸ್ಯರ ಸಮಿತಿ ರೂಪೀಕರಿಸಲಾಯಿತು. ದಿನೇಶ್ ಪಿ  ಅಧ್ಯಕ್ಷತೆ ವಹಿಸಿದರು. ಉದಯ ಬಿ.ಕೆ ಸ್ವಾಗತಿಸಿ,  ಕೋಶಾಧಿಕಾರಿ ಸುಬ್ರಹ್ಮಣ್ಯ ಪೈ ವಂದಿಸಿದರು.

Leave a Reply

Your email address will not be published. Required fields are marked *

You cannot copy content of this page