ಕಾಸರಗೋಡು: ತ್ಯಾಜ್ಯ ಸಂಸ್ಕರಣೆ ವಲಯದಲ್ಲಿ ಕಾನೂನುಗಳ ಉಲ್ಲಂಘನೆ ಪರಿಶೀಲಿಸುವ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಮಂಜೇಶ್ವರ ಪಂಚಾಯತ್ನ ಹೊಸಂಗಡಿಯಲ್ಲಿರುವ ಯಾಫ್ಕೋ ಇಂಡಸ್ಟ್ರೀಸ್ ಎಂಬ ಫ್ಲೈವುಡ್ ಕಂಪೆನಿಯ ಅನ್ಯರಾಜ್ಯ ಕಾರ್ಮಿಕರು ಮಲಿನಜಲವನ್ನು ಬಹಿರಂಗವಾಗಿ ಹರಿಯಬಿಟ್ಟ ಹಿನ್ನೆಲೆಯಲ್ಲಿ ಮಾಲಕನಿಂದ 15,000 ರೂ. ದಂಡ ವಸೂಲಿ ಮಾಡಿ ಸೋಕ್ಪಿಟ್ ಸ್ಥಾಪಿಸಲು ನಿರ್ದೇಶ ನೀಡಲಾಯಿತು.
ಮೀಂಜದ ಇಂಗ್ಲಿಷ್ ಮಾಧ್ಯಮ ಶಾಲೆ, ವರ್ಕಾಡಿಯ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರತ್ಯೇಕವಾಗಿ ಸಿದ್ಧಪಡಿಸಿದ ಹೊಂಡಗಳಲ್ಲಿ ಪ್ಲಾಸ್ಟಿಕ್ ಸಹಿದ ತ್ಯಾಜ್ಯಗಳನ್ನು ಉರಿಸಿರುವುದು ಪತ್ತೆಹಚ್ಚಿದ್ದು, ಈ ಹಿನ್ನೆಲೆಯಲ್ಲಿ 5,000 ರೂ. ದಂಡ ವಸೂಲು ಮಾಡಲಾಯಿತು. ಅಪಾರ್ಟ್ಮೆಂಟ್ನಲ್ಲಿ ತ್ಯಾಜ್ಯ ಸಂಸ್ಕರಣೆ ವ್ಯವಸ್ಥೆ ಸಿದ್ಧಪಡಿಸದ ಹಿನ್ನೆಲೆಯಲ್ಲಿ ಮಂಜೇಶ್ವರದ ವಿವಿಧ ಕ್ವಾರ್ಟರ್ಸ್, ಅಪಾರ್ಟ್ಮೆಂಟ್ ಮಾಲಕರಿಗೆ 5೦೦೦ ರೂ.ನಂತೆ ದಂಡ ಹೇರಲಾಯಿತು. ತಪಾಸಣೆಯಲ್ಲಿ ಜಿಲ್ಲಾ ಎನ್ಫೋರ್ಸ್ಮೆಂಟ್ ಸ್ಕ್ವಾಡ್ ಲೀಡರ್ ಕೆ.ವಿ. ಮೊಹಮ್ಮದ್ ಮದನಿ, ಸದಸ್ಯ ಜೋಸ್ ವಿ.ಎಂ, ಹೆಲ್ತ್ ಇನ್ಸ್ಪೆಕ್ಟರ್ಗಳಾದ ಜಾಸ್ಮಿನ್ ಪಿ.ಕೆ, ಮಂಜು ಟಿ, ಅಖಿಲ್ ಸಿ.ಎ, ಅಶ್ವತಿ ಸಿ. ನಾಯರ್, ಕ್ಲರ್ಕ್ ಹರಿತ ಆರ್. ನೇತೃತ್ವ ನೀಡಿದರು.






