ಕಟ್ಟಿ ಹಾಕಿದ್ದ ಕೋಳಿಯನ್ನು ಹಗ್ಗ ಸಹಿತ ನುಂಗಿದ ಹೆಬ್ಬಾವು

ಕಾಸರಗೋಡು: ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ  ಕೋಳಿಯನ್ನು  ಹೆಬ್ಬಾವು ಹಗ್ಗ ಸಹಿತ  ನುಂಗಿದ ಘಟನೆ ನಡೆದಿದೆ.  ಪೆರಿಯ ಆಯಂಬಾರ  ಕಾನತ್ತಿಲ್‌ನ ಮಾಲತಿ ಎಂಬವರ ಮನೆಯ ಹುಂಜಮನ್ನು ಹೆಬ್ಬಾವು  ನುಂಗಿದೆ.  ಎಂದಿನಂತೆ ಇಂದು ಬೆಳಿಗ್ಗೆ ಕೋಳಿಗೆ ಆಹಾರ ಕೊಡಲು ಮಾಲತಿ ಹೋದಾಗ ಕೋಳಿ  ಅಲ್ಲಿರಲಿಲ್ಲ. ಬಳಿಕ ಹುಡುಕಾಡಿದಾಗ  ಕೊಟ್ಟಿಗೆಯ  ಒಂದು ಮೂಲೆಯಲ್ಲಿ ಹೆಬ್ಬಾವು  ಕಂಡುಬಂದಿದೆ.  ಅದನ್ನು ಕಂಡ ಮಾಲತಿ ಬೊಬ್ಬೆ ಹಾಕಿದ್ದು,  ಕೂಡಲೇ ಇತರರು ತಲುಪಿ ನೋಡಿದಾಗ ಹೆಬ್ಬಾವು  ಕೋಳಿಯನ್ನು ಹಗ್ಗ ಸಹಿತ ನುಂಗಿರುವುದು ತಿಳಿದುಬಂದಿದೆ.  ಇದೇ ವೇಳೆ ಹಗ್ಗ ತುಂಡಾಗದು ದರಿಂದ ಹೆಬ್ಬಾವಿಗೆ ಅಲ್ಲಿಂದ ಪಾರಾಗಲು ಸಾಧ್ಯವಾಗಿಲ್ಲ. ಈ ಮಾಹಿತಿ ತಿಳಿದ  ಸ್ನೇಕ್ ರೆಸ್ಕ್ಯೂವರ್ ಹಾಗೂ  ಪರಿಸರ ಕಾರ್ಯಕರ್ತನಾದ ಕೆಟಿಎಸ್ ಪನಯಾಲ್ ಸ್ಥಳಕ್ಕೆ ತಲುಪಿ ದ್ದಾರೆ. ಬಳಿಕ ಕೋಳಿಯನ್ನು ಕಟ್ಟಿಹಾಕಲಾದ ಹಗ್ಗವನ್ನು ತುಂಡರಿಸಿ ಹೆಬ್ಬಾವನ್ನು  ರಕ್ಷಿಸಲಾಯಿತು.

You cannot copy contents of this page