ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ: ಇಬ್ಬರ ವಿರುದ್ಧ ಕೇಸು

ಮಂಜೇಶ್ವರ: ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ ಪೊಲೀಸರ ಆದೇಶ ಉಲ್ಲಂ ಘಿಸಿ ಮುಂದಕ್ಕೆ ಸಾಗಿದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ತಿರುವನಂತ ಪುರ ಕುಂಜೀರಂಕುಳಂ ಕಲ್ಲುವಿಳ ಪುತ್ತನ್ ವೀಡ್‌ನ ಅನೀಶ್ ಕುಮಾರ್ ಕೆ.ಎ. (36), ತಾಯನ್ನೂರು ಶಾಸ್ತಾಂಪಾರದ ರವೀಂದ್ರನ್ ಎ. (50) ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ನಿನ್ನೆ ಸಂಜೆ ತಲಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜೇಶ್ವರ ಪೊಲೀಸರು ವಾಹನ ತಪಾಸಣೆಯಲ್ಲಿ ತೊಡಗಿದ್ದ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಹೆಲ್ಮೆಟ್ ಧರಿಸದೆ ಇಬ್ಬರು ಪ್ರಯಾಣಿಸುತ್ತಿರುವುದನ್ನು ಕಂಡ ಪೊಲೀಸರು ಆ ಬೈಕ್‌ನ್ನು  ನಿಲ್ಲಿಸುವಂತೆ ಕೈಸನ್ನೆ ನೀಡಿದರೂ ಬೈಕ್ ನಿಲ್ಲದೆ ಮುಂದಕ್ಕೆ ಸಾಗಿದೆ.ತಕ್ಷಣ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್ ಸಹಿತ ಇಬ್ಬರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಡರು. ಬಂಧಿತರಿಬ್ಬರು ಮದ್ಯದಮಲಿನಲ್ಲಿ ದ್ದರೆಂದೂ ಪೊಲೀಸರು ತಿಳಿಸಿದ್ದಾರೆ.

You cannot copy contents of this page