ಆಹಾರ ಕಿಟ್ ಮಾರಾಟ ಆರೋಪ: ಮಂಗಲ್ಪಾಡಿ ಪಂ.ಗೆ ಡಿಫಿಯಿಂದ ಮಾರ್ಚ್
ಉಪ್ಪಳ: ಮುಂಡಕೈ ಚೂರಲ್‌ಮಲದಲ್ಲಿ ಸಂಭವಿಸಿದ ದುರಂತ ಸಂತ್ರಸ್ತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಂಗಲ್ಪಾಡಿ ಪಂಚಾಯತ್ ಆಡಳಿತ ಸಮಿತಿ ಸಂಗ್ರಹಿಸಿದ ಆಹಾರ ಕಿಟ್‌ಗಳನ್ನು ಮಾರಾಟ ಮಾಡಿರುವುದಾಗಿ ಆರೋಪಿಸಿ ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ವತಿಯಿಂದ ಇಂದು ಬೆಳಿಗ್ಗೆ ಪಂಚಾಯತ್‌ಗೆ ಮಾರ್ಚ್ ನಡೆಸಲಾಯಿತು.
ಸಿಪಿಎಂ ಮಂಜೇಶ್ವರ ಏರಿಯಾ ಕಾರ್ಯದರ್ಶಿ ವಿ.ವಿ. ರಮೇಶನ್ ಮಾರ್ಚ್ ಉದ್ಘಾಟಿಸಿದರು. ಡಿಫಿ ಮಂಜೇಶ್ವರ ಬ್ಲೋಕ್ ಅಧ್ಯಕ್ಷ ವಿನಯ ಕುಮಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಹಾರಿಸ್ ಪೈವಳಿಕೆ ಸಹಿತ ಹಲವರು ಭಾಗವಹಿಸಿದರು.