ಇಚ್ಲಂಗೋಡು ಪಚ್ಚಂಬಳ ಮಖಾಂ ಉರೂಸ್ ಫೆ. ೪ರಿಂದ

ಕುಂಬಳೆ: ಬಂದ್ಯೋಡು ಬಳಿಯ ಇಚ್ಲಂಗೋಡು ಪಚ್ಚಂಬಳ ಬಾವ ಫಕೀರ್ ವಲಿಯುಲ್ಲಾಗಿ ಅಳರಮಿ ಮಖಾಂ ಉರೂಸ್ ೨೦೨೪ ಫೆಬ್ರವರಿ ೪ರಿಂದ ೧೮ರವರೆಗೆ ಜರಗಲಿದೆಯೆಂದು ಪದಾಧಿಕಾರಿಗಳು ಕುಂಬಳೆ ಪ್ರೆಸ್ ಫಾರಂನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಳೆದ ತಿಂಗಳ ೨೧ರಂದು ನಡೆದ ಧ್ವಜಾರೋಹಣದೊಂದಿಗೆ ಉರೂಸ್‌ಗಿರುವ ಸಿದ್ಧತೆಗಳು ಆರಂಭಗೊಂಡಿದೆ. ಉರೂಸ್ ನಡೆಯುವ ದಿನಗಳಲ್ಲಿ ಮತಪಂಡಿತರಿಂದ ಮತ ಪ್ರವಚನ, ಸ್ವಲಾತ್ ಮಜ್ಲಿಸ್ ಮೊದಲಾದ ಕಾರ್ಯಕ್ರಮ ನಡೆಯಲಿದೆ. ೧೮ರಂದು ಅನ್ನದಾನವಿರುವುದು. ಕರ್ನಾಟಕದಿಂದಲೂ, ಜಿಲ್ಲೆಯ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.

ಇಚ್ಲಂಗೋಡು ಮಹಲ್ ಉಪಾಧ್ಯಕ್ಷ ಖತ್ತರ್ ಮೊಯ್ದು ಹಾಜಿ, ಪ್ರಧಾನ ಕಾರ್ಯದರ್ಶಿ ಮಹಮ್ಮೂದ್ ಕುಟ್ಟಿ ಹಾಜಿ, ಖತೀಬ್ ಇರ್ಶಾದ್ ಫೈಸಿ ಬೆಳ್ಳಾರಿ, ಉರೂಸ್ ಸಮಿತಿ ಕನ್ವೀನರ್ ಮೊಯ್ದು ಹಾಜಿ, ಪ್ರಚಾರ ಸಮಿತಿ ಸಂಚಾಲಕ ಹಸನ್ ಇಚ್ಲಂಗೋಡು, ಕೋಶಾಧಿಕಾರಿ ಫಾರೂಕ್ ಪಚ್ಚಂಬಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page