ಇಬ್ಬರು ಗೃಹಿಣಿಯರ ನಾಪತ್ತೆ

ಹೊಸದುರ್ಗ: ಎರಡು ವ್ಯತ್ಯಸ್ಥ ಸ್ಥಾನಗಳಿಂದ ಇಬ್ಬರು ಗೃಹಿಣಿಯರು ನಾಪತ್ತೆಯಾಗಿದ್ದಾರೆ. ಪನತ್ತಡಿ ಎರಿಂ ಞಿಲಂಕೋಡ್ ಪಿ.ಜಿ. ಅನೀಶ್‌ರ ಪತ್ನಿ ತ್ರೇಸ್ಯಮ್ಮ ಯಾನೆ ಮೇರಿ (೩೬) ನಿನ್ನೆ ಬೆಳಿಗ್ಗಿನಿಂದ ನಾಪತ್ತೆಯಾಗಿರುವುದಾಗಿ  ದೂರಲಾಗಿದೆ. ಪೂಡಂಕಲ್ಲ್‌ನ ತಾಲೂಕು ಆಸ್ಪತ್ರೆಗೆಂದು ತಿಳಿಸಿ ಮನೆ ಯಿಂದ ಈಕೆ ತೆರಳಿದ್ದರೆನ್ನಲಾಗಿದೆ. ಈ ಬಗ್ಗೆ ಪತಿ ನೀಡಿದ ದೂರಿಂತೆ ರಾಜಪುರಂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅದೇ ರೀತಿ ವೆಳ್ಳರಿಕುಂಡ್ ಭೀಮನಡಿ ಕೂರಾಂಕುಂಡ್ ನಿವಾಸಿ ಉಂಡಚ್ಚಿ (೬೯) ಎಂಬವರು ನಿನ್ನೆ ಸಂಜೆ ೬ ಗಂಟೆ ಬಳಿಕ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಪುತ್ರ ಎ.ಡಿ. ಸುಧೀಶ್ ವೆಳ್ಳರಿಕುಂಡ್ ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page