ಇಬ್ಬರು ಯುವತಿಯರು ನಾಪತ್ತೆ: ತನಿಖೆ ಆರಂಭ
ಕಾಸರಗೋಡು: ಬದಿಯಡ್ಕ ಹಾಗೂ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಇಬ್ಬರು ಯುವತಿಯರು ನಾಪತ್ತೆ ಯಾಗಿರುವುದಾಗಿ ದೂರಲಾಗಿದೆ. ಈ ಎgಡು ಘಟನೆಗಳಲ್ಲಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಬದಿಯಡ್ಕ ಸಮೀಪ ಪಳ್ಳತ್ತಡ್ಕದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಮಂಜುಳ (19) ಜನವರಿ 30ರಿಂದ ನಾಪತ್ತೆಯಾಗಿರುವುದಾಗಿ ದೂರಲಾಗಿದೆ. ಸ್ಥಳೀಯ ನಿವಾಸಿಯಾದ ಬಿರ್ಮ ಎಂಬಾತ ನೊಂದಿಗೆ ಯುವತಿ ತೆರಳಿರು ವುದಾಗಿ ಸಂಶಯಿಸಲಾಗುತ್ತಿದೆ ಯೆಂದು ತಾಯಿ ಲಲಿತ ಬದಿಯಡ್ಕ ಪೊಲೀ ಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಗರೆ. ಲಲಿತ ಹಾಗೂ ಕುಟುಂಬ ಕರ್ನಾಟಕದ ಬಾಗಲಕೋಟೆ ನಿವಾಸಿಗಳಾಗಿದ್ದಾರೆ.
ಮಾವುಂಗಾಲ್ ಪುಲಯನಡ್ಕದ ಮೆರಿನ್ ಥೋಮಸ್ (24) ಎಂ ಬಾಕೆ ಜನವರಿ ೧ರಿಂದ ನಾಪತ್ತೆಯಾ ಗಿದ್ದಾಳೆ ಎನ್ನಲಾಗಿದೆ. ಮಂಗಳೂರಿ ನಲ್ಲಿ ಕೆಲಸಕ್ಕೆಂದು ತಿಳಿಸಿ ಈಕೆ ತೆರಳಿದ್ದಳು. ಅನಂತರ ಆಕೆ ಕುರಿತು ಯಾವುದೇ ಮಾಹಿತಿ ಲಭಿಸದುದ ರಿಂದ ನಡೆಸಿದ ತನಿಖೆಯಲ್ಲಿ ವೆಳ್ಳಿ ಕೋತ್ ನಿವಾಸಿಯಾದ ಇರ್ಫಾನ್ ಸಲೀಂ ಎಂಬ ಯುವಕನೊಂದಿಗೆ ತೆರಳಿರುವುದಾಗಿ ಸಂಶಯಿಸಲಾಗುತ್ತಿದೆ ಯೆಂದು ತಂದೆ ಥೋಮಸ್ ಕೆ ಜೋಸೆಫ್ ಹೊಸದುರ್ಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.