ಇಬ್ಬರು ವಿದ್ಯಾರ್ಥಿನಿಯರಿಗೆ ಕಿರುಕುಳ :ಯುವಕ ಪೋಕ್ಸೋ ಪ್ರಕಾರ ಸೆರೆ
ಮುಳ್ಳೇರಿಯ: ಶಾಲಾ ವಿದ್ಯಾರ್ಥಿ ನಿಯರಾದ ಇಬ್ಬರಿಗೆ ಕಿರುಕುಳ ನೀಡಲೆತ್ನಿಸಿದ ಆರೋ ಪದಂತೆ ಯುವಕನ ವಿರುದ್ಧ ಆದೂರು ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ. ಆದೂರು ಕುಂಡಲ ನಾವುಂಗಾಲ್ನ ನಾಗೇಶ್.ಕೆ (42) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ಆರೋಪಿಯು ವಿದ್ಯಾ ರ್ಥಿನಿಯರ ದೇಹ ಸ್ಪರ್ಶಿಸಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ. ಈ ವಿಷಯವನ್ನು ಪಿದ್ಯಾರ್ಥಿನಿಯರು ಶಾಲಾ ಅಧ್ಯಾಪಿಕೆಯಲ್ಲಿ ತಿಳಿ ಸಿದ್ದರು. ಅಧ್ಯಾಪಿಕೆ ನೀಡಿದ ಮಾಹಿತಿಯಂತೆ ಚೈಲ್ಡ್ ಲೈನ್ ಅಧಿಕಾರಿಗಳು ಈ ಬಗ್ಗೆ ಆದೂರು ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಆರೋಪಿಯನ್ನು ಬಂಧಿಸಲಾಗಿದೆ.