ಇರಾನ್‌ನಲ್ಲಿ ಇಸ್ರೇಲ್ ನಿಂದ ಆಕ್ರಮಣ: ಮಧ್ಯಪೂರ್ವದಲ್ಲಿ ಯುದ್ಧ ಭೀತಿ

ಟೆಹರಾನ್: ಈ ತಿಂಗಳ ೧೩ರಂದು ಇರಾನ್ ನಡೆಸಿದ ಆಕ್ರಮಣಕ್ಕೆ ಪ್ರತ್ಯುತ್ತರವಾಗಿ ವಿಮಾನ ನಿಲ್ದಾಣಗಳು ಸೇರಿದಂತೆ ತೀವ್ರ  ಆಕ್ರಮಣವನ್ನು ಇಸ್ರೇಲ್ ನಡೆಸಿದೆ. ಇರಾನ್ ನಗರವಾದ ಇನ್‌ಫಾಹಾನ್‌ನಲ್ಲಿ  ಶಾಹಿದ್ ಸಲಾಂ ಏರ್‌ಬೇಸ್‌ನಲ್ಲಿ ಆಕ್ರಮಣ ನಡೆಸಲಾಗಿದೆ. ಇಸ್‌ಫಹಾನ್ ಪ್ರದೇಶದ ಸೈನಿಕ ಕೇಂದ್ರದ ಸಮೀಪದಲ್ಲಿ ಹಲವಾರು ಸ್ಫೋಟ ಶಬ್ದಗಳು ಕೇಳಿ ಬಂದಿರುವುದಾಗಿ ಇರಾನ್ ಮಾಧ್ಯಮವಾದ ಫಾರ್ಸ್ ವರದಿ ಮಾಡಿದೆ. ಇಸ್ರೇಲ್ ಪ್ರತ್ಯಾಕ್ರಮಣ ನಡೆಸುತ್ತದೆ ಎಂಬ ವರದಿ ಮಧ್ಯಪೂರ್ವ ದೇಶದಲ್ಲಿ ಯುದ್ಧ ಭೀತಿ ತೀವ್ರಗೊಳಿಸಿದೆ.

ಇರಾನ್‌ನ ಪರಮೋನ್ನತ ಮುಖಂಡ ಆಯತುಲ್ಲ ಖಮನಯಿಯವರ ೮೫ನೇ ಜನ್ಮದಿನದಲ್ಲಿ ಇಸ್ರೇಲ್‌ನ ತಿರುಗೇಟು ಎಂಬುದು ಗಮನಾರ್ಹವಾಗಿದೆ. ಸೈನಿಕ ಕ್ರಮದೊಂದಿಗೆ ಇಸ್ರೇಲ್ ಮುಂದುವರಿಯುವುದಾದರೆ ಪ್ರತ್ಯುತ್ತರ ನೀಡಲಾಗುವುದೆಂದು ಇರಾನ್ ವಿದೇಶಾಂಗ ಸಚಿವ ಹುಸೈನ್ ಆಮಿರ್ ಅಬ್ದುಲ್ಲಾಹಿಯನ್ ಘೋಷಿಸಿದ ಬೆನ್ನಲ್ಲೇ ಆಕ್ರಮಣ ಉಂಟಾಗಿದೆ.

Leave a Reply

Your email address will not be published. Required fields are marked *

You cannot copy content of this page