ಇರಿತ: ಕೊಲೆಯತ್ನ ಪ್ರಕರಣ ದಾಖಲು

ಮುಳ್ಳೇರಿಯ: ಮುಳಿಯಾರು ಮುಂಡಕೈ ಮಲ್ಲಚ್ಚೇರಿಯಡ್ಕದ ಗಂಗಾಧರನ್ ಕೆ. (೪೭) ಎಂಬವರನ್ನು ಎ.೧ರಂದು ಮುಂಡಕೈಯಲ್ಲಿ ಇರಿದು ಗಂಭೀರ ಗಾಯಗೊಳಿಸಿದ ದೂರಿನಂತೆ ಆದೂರು ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಯಗೊಂಡ ಗಂಗಾಧರನ್‌ರನ್ನು ಚೆಂಗಳ ಇ.ಕೆ. ನಾಯನ್ನಾರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಬಗ್ಗೆ ಗಾಯಾಳು ಗಂಗಾಧರನ್‌ರ ಪತ್ನಿ ಮೀನಾಕ್ಷಿ ನೀಡಿರುವ ಹೇಳಿಕೆ ಪ್ರಕಾರ ಪೊಲೀಸರು ಈ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರಂತೆ ಮುಳಿಯಾರು ಮಂಡಕೈಯ ಗಂಗು ಎಂಬಾತನ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಪೂರ್ವದ್ವೇಷವೇ ಹಲ್ಲೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page