ಇಸ್ರೋದಿಂದ 100ನೇ ಉಪಗ್ರಹ ಯಶಸ್ವಿ ಉಡಾವಣೆ
ತಿರುಪತಿ: ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ತನ್ನ 100ನೇ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಸ್ರೋ ತನ್ನ 100ನೇ ಮಿಷನ್, ಎನ್.ವಿ.ಎಸ್-02 ನ್ಯಾವಿಗೇಷನ್ ಉಪಗ್ರಹವನ್ನು ಇಂದು ಬೆಳಿಗ್ಗೆ 6.23 ಕ್ಕೆ ಉಡಾವಣಾ ವಾಹನ ಜಿ.ಎಸ್.ಎಲ್.ವಿ. ಎಫ್- 15ನಲ್ಲಿ ಶ್ರೀಹರಿಕೋಟಾದಿಂದ ಉಡಾವಣೆ ಮಾಡಿದೆ.
ಲೆಟ್‌ಆಫ್ ಜಿ.ಎಸ್.ಎಲ್.ವಿ.ಎಫ್-೧೫ ಯಶಸ್ವಿಯಾಗಿ ಹಾರಾಟ ನಡೆಸಿದೆ. ಎನ್.ವಿ.ಎಸ್. 02ವನ್ನು ತನ್ನ ಯೋಜಿತ ಕಕ್ಷೆಗೆ ಕರೆದೊಯ್ದಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ. ಇದು ಎನ್.ವಿ.ಎಸ್ 02 ಉಪಗ್ರಹವನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ ಇರಿಸಲು ಸ್ಥಳೀಯ ಕ್ರಿಯೋಜೆನಿಕ್ ಹಂತವನ್ನು ಹೊಂದಿರುವ ಜಿಎಸ್‌ಎಲ್‌ವಿ- ಎಫ್ 15 ರಾಕೆಟ್ ಬಳಸುವುದನ್ನು ಒಳಗೊಂಡಿರುತ್ತದೆ ಎಂದು ಇಸ್ರೋ ತಿಳಿಸಿದೆ. ಇಸ್ರೋ ಪ್ರಕಾರ ನ್ಯಾವಿಗೇಷನ್ ವಿದ್ ಇಂಡ್ಯನ್ ಕಾನ್‌ಸ್ಟಲೇಶನ್ ಭಾರತದ ಸ್ವತಂತ್ರ ಪ್ರಾದೇಶಿಕ ನ್ಯಾವಿಗೇಶನ್ ವ್ಯವಸ್ಥೆಯಾಗಿದ್ದು, ಇದು ಭಾರತದಲ್ಲಿ ಮಾತ್ರವಲ್ಲದೆ ಭಾರತೀಯ ಭೂಪ್ರದೇಶವನ್ನು ಮೀರಿ ಸುಮಾರು 1500ರಷ್ಟು ವಿಸ್ತರಿಸಿರುವ ಪ್ರದೇಶಗಳಲ್ಲೂ ಬಳಕೆದಾರರಿಗೆ ನಿಖರವಾದ ಸ್ಥಾನ, ವೇಗ ಮತ್ತು ಸಮಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದೆ ಎಂದು ಇಸ್ರೋ ತಿಳಿಸಿದೆ.