ಇಸ್ಲಾಮಿಕ್ ಸ್ಟೇಟ್ ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು ಹೂಡಿದ ಪ್ರಕರಣದ ಆರೋಪಿಗೆ ಹತ್ತು ವರ್ಷ ಕಠಿಣ ಸಜೆ

ಕೊಚ್ಚಿ: ಜಾಗತಿಕ ಭಯೋತ್ಪಾದಕ ಸಂಘಟನೆ ಯಾದ ಇಸ್ಲಾಮಿಕ್ ಸ್ಟೇಟ್ (ಐಸಿಸ್) ಮಾದರಿಯಲ್ಲಿ ಕೇರಳದಲ್ಲಿ ಆತ್ಮಾಹುತಿ ದಾಳಿಗೆ ಸಂಚು ಹೂಡಿದ ಪ್ರಕರಣದ  ಆರೋಪಿ ಪಾಲ್ಘಾಟ್ ಕೊಲ್ಲಂಕೋಡು ನಿವಾಸಿ ರಿಯಾಸ್ ಅಬೂಬಕರ್ (೩೫)ನಿಗೆ ಕೊಚ್ಚಿಯ ಎನ್‌ಐಎ ನ್ಯಾಯಾಲಯ ಹತ್ತು ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ. ಈ ತನಕ ವಿರುದ್ಧ ಯುಎ ಪಿಎ ಪ್ರಕಾರ ಹಾಗೂ ಇತರ ಹಲವು ಸೆಕ್ಷನ್‌ಗಳ (ಎನ್‌ಐಎ) ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿತ್ತು.

ವಿವಿಧ ಸೆಕ್ಷನ್‌ಗಳಲ್ಲಾಗಿ ನ್ಯಾಯಾಲಯ ಆರೋಪಿಗೆ ಒಟ್ಟು ೨೫ ವರ್ಷ ಕಠಿಣ ಸಜೆ ವಿಧಿಸಿದೆಯಾದರೂ, ಅದನ್ನು ಒಟ್ಟಿಗೆ ೧೦ ವರ್ಷವಾಗಿ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸ ಲಾಗಿದೆ. ಶಿಕ್ಷೆಯ ಹೊರತಾಗಿ ಆರೋಪಿಗೆ ೧,೨೫,೦೦೦ ರೂ. ಜುಲ್ಮಾನೆಯನ್ನೂ ನ್ಯಾಯಾಲಯ ವಿಧಿಸಿದೆ.

ಆರೋಪಿ ರಿಯಾಸ್ ಅಬೂಬ ಕರ್ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲೇ ಕಳೆಯುತ್ತಿದ್ದಾನೆ. ಇಸ್ಲಾಮಿಕ್ ಸ್ಟೇಟ್ (ಐಸಿಸ್)ಗೆ ಸೇರಲೆಂದು ೨೦೧೬ರಲ್ಲಿ ಕಾಸರಗೋಡು ಜಿಲ್ಲೆಯ ೧೪ ಮಂದಿ ಅಪಘಾನಿಸ್ಥಾನ ಮತ್ತು ಸಿರಿಯಾಕ್ಕೆ ಹೋಗಿದ್ದರು. ಆ ಬಗ್ಗೆ ಎನ್‌ಐಎ ನಡೆಸಿದ ತನಿಖೆಯಲ್ಲಿ ರಿಯಾಸ್ ಅಬೂಬಕರ್ ಕುರಿತಾದ ಮಾಹಿತಿ ಎನ್‌ಐಎಗೆ ಲಭಿಸಿತ್ತು. ಅದರಂತೆ ಎನ್‌ಐಎ ಆತನನ್ನು ಬಂಧಿಸಿದ ನಡೆಸಿದ ಸಮಗ್ರ ತನಿಖೆಯಲ್ಲಿ ಆತ ಐಸಿಸ್ ಮಾದರಿಯ ಆತ್ಮಾಹುತಿ ದಾಳಿಯನ್ನು ಕೇರಳದ ಹಲವೆಡೆಗಳಲ್ಲಿ ನಡೆಸುವ ಸಂಚಿಗೆ ರೂಪು ನೀಡಿದ್ದನೆಂಬುವುದು ಸ್ಪಷ್ಟಗೊಂಡಿತ್ತು. ಅದರಂತೆ ಎನ್‌ಐಎ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ೨೦೧೮ ಮೇ ೧೫ರಂದು ರಿಯಾಸ್ ಅಬೂಬಕರ್‌ನನ್ನು ಎನ್‌ಐಎ ಬಂಧಿಸಿತ್ತು. ಶ್ರೀಲಂಕಾದ ಇಗರ್ಜಿಯಲ್ಲಿ ವರ್ಷಗಳ ಹಿಂದೆ ನಡೆದ ಭಯೋತ್ಪಾದಕ ದಾಳಿಯ ಸೂತ್ರಧಾರ ನೊಂದಿಗೆ ಸೇರಿಕೊಂಡು, ಅಂತಹ ದಾಳಿಯನ್ನು ಕೇರಳದಲ್ಲೂ ನಡೆಸುವ ಸಂಚು ಹೂಡಿದ್ದನೆಂದೂ ಎನ್‌ಐಎ ತನಿಖಾ ವರದಿಯಲ್ಲಿ  ಸೂಚಿಸಲಾಗಿದೆ.

ಭಯೋತ್ಪಾದನೆಗಾಗಿ ರಿಯಾಸ್ ಅಬೂಬಕರ್ ಸೋಶ್ಯಲ್ ಮೀಡಿಯಾ ಮೂಲಕ ಹಲವರನ್ನು ತನ್ನ ಸಂಘಟನೆಯತ್ತ್ತ ಸೆಳೆದು ಕೊಳ್ಳುವ ಪ್ರಯತ್ನವನ್ನು ನಡೆಸಿದ್ದ ನೆಂದೂ ಆ ಕುರಿತಾದ ಹಲವು ಪುರಾವೆಗಳೂ ತನಿಖೆಯಲ್ಲಿ  ಎನ್‌ಐಎಗೆ ಲಭಿಸಿತ್ತು. ಆರೋಪಿ ಕೇರಳದಲ್ಲೂ ಐಸಿಸ್ ಘಟಕ ಆರಂಭಿಸಿ ಆ ಮೂಲಕ ಕೇರಳದ ಹಲವೆಡೆಗಳಲ್ಲಿ ಆತ್ಮಾ ಹುತಿ ಬಾಂಬು ದಾಳಿ ನಡೆಸುವ ಸ್ಕೆಚ್ ಹಾಕಿಕೊಂಡಿದ್ದ ನೆಂದು ಎನ್‌ಐ ನ್ಯಾಯಾಲಯಕ್ಕೆ ಸಲ್ಲಿಸಿದ ತನಿಖಾ ವರದಿಯಲ್ಲಿ ತಿಳಿಸಿತ್ತು.

Leave a Reply

Your email address will not be published. Required fields are marked *

You cannot copy content of this page