ಇ.ಪಿ. ಜಯರಾಜನ್ ಬಿಜೆಪಿ ಸೇರಲು ಹಲವು ಬಾರಿ ಚರ್ಚೆ ನಡೆಸಿದ್ದರು-ಸುರೇಂದ್ರನ್

ತಿರುವನಂತಪುರ: ಎಡರಂಗದ ರಾಜ್ಯ ಸಂಚಾಲಕ ಇ.ಪಿ. ಜಯರಾಜನ್ ಅವರು ಬಿಜೆಪಿ ಸೇರಲು ಈ ಹಿಂದೆ ಹಲವು ಬಾರಿ ಚರ್ಚೆ ನಡೆಸಿದ್ದಾರೆಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಹೇಳಿದ್ದಾರೆ. ಬಿಜೆಪಿ ರಾಜ್ಯ ನೇತೃತ್ವದ ಅರಿವಿನಿಂದಲೇ ಈ ಚರ್ಚೆಗಳನ್ನು ನಡೆಸಲಾಗಿದೆ. ಮಾತ್ರವಲ್ಲ ಎಡರಂಗದಲ್ಲಿ ಅಸಂತೃಪ್ತಿ ಹೊಂದಿರುವ ಇತರ ಹಲವರೊಂದಿಗೂ ಚರ್ಚೆ ನಡೆಸಲಾಗಿದೆ. ಜೂನ್ ೪ರ ಬಳಿಕ ಇ.ಪಿ. ಜಯರಾಜನ್ ಸೇರಿದಂತೆ ಸಿಪಿಎಂನ ಹಲವರು ಬಿಜೆಪಿ ಸೇರಲಿರುವರೆಂದು ಸುರೇಂದ್ರನ್ ಹೇಳಿದ್ದಾರೆ.

Leave a Reply

Your email address will not be published. Required fields are marked *

You cannot copy content of this page