ಉಂರ ನಿರ್ವಹಿಸಿ ಹಿಂತಿರುಗುವ ಮಧ್ಯೆ ತಳಂಗರೆ ನಿವಾಸಿ ನಿಧನ
ಕಾಸರಗೋಡು: ಉಂರ ನಿರ್ವಹಿಸಿ ಊರಿಗೆ ಹಿಂತಿರುಗಲು ಸಿದ್ಧತೆ ನಡೆಸುತ್ತಿದ್ದ ಮಧ್ಯೆ ತಳಂಗರೆ ಬಾಂಗೋಡು ನಿವಾಸಿ ಇಸ್ಮಾಯಿಲ್ (85) ಮದೀನದಲ್ಲಿ ನಿಧನ ಹೊಂದಿದರು. ಈ ತಿಂಗಳ 2ರಂದು ಪತ್ನಿ ನಫೀಸರೊಂದಿಗೆ ಉಂರಕ್ಕೆ ತೆರಳಿದ್ದರು. ಹಿಂತಿರುಗಲು ಸಿದ್ಧತೆ ನಡೆಸುತ್ತಿದ್ದ ಮಧ್ಯೆ ಎದೆನೋವು ಉಂಟಾಗಿದೆ. ಬಳಿಕ ಆಸ್ಪತ್ರೆಗೆ ದಾಖಲಿ ಸಿದ್ದರೂ ನಿನ್ನೆ ಸಂಜೆ ನಿಧನರಾದರು. ಮೃತದೇಹದ ಅಂತ್ಯಕ್ರಿಯೆ ಮದೀನದಲ್ಲೇ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಮೃತರು ಪತ್ನಿ, ಮಕ್ಕಳಾದ ಹಮೀದ್, ಅಲಿ, ರಜಾಕ್, ನೌಶಾದ್, ಜಲೀಲ್, ಖಲೀಲ್, ರಂಶೀನ, ಅಳಿಯಂದಿರು, ಸೊಸೆಯಂದಿರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.