ಉಂರ ವಿಸಾ ಭರವಸೆಯೊಡ್ಡಿ ವಂಚನೆ: ಲಕ್ಷಾಂತರ ರೂಪಾಯಿ, ಪಾಸ್ಪೋರ್ಟ್ ಪಡೆದು ಯುವಕ ಪರಾರಿ
ಕಾಸರಗೋಡು: ಉಂರ ವಿಸಾ ಭರವಸೆ ನೀಡಿ ಹಲವರಿಂದ ಲಕ್ಷಾಂತರ ರೂಪಾಯಿ ಲಪಟಾ ಯಿಸಿ ಯುವಕ ತಲೆಮರೆಸಿಕೊಂಡಿ ದ್ದಾನೆ. ಘಟನೆಗೆ ಸಂಬಂಧಿಸಿ ಹಣ ನಷ್ಟಗೊಂಡ ಪರಪ್ಪ ಕ್ಲ್ಲಾಯಿ ಕ್ಕೋಡ್ನ ಜಮೀಲ ಎಂಬವರ ದೂರಿನಂತೆ ಕ್ಲಾಯಿಕ್ಕೋಡ್ನ ಅಬ್ದುಲ್ ರೌಫ್ ವಿರುದ್ಧ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಜಮೀಲರಿಗೆ ೮೦ ಸಾವಿರ ರೂಪಾಯಿ ಈತ ವಂಚಿಸಿದ್ದಾನೆನ್ನಲಾಗಿದೆ. ಇದೇ ರೀತಿಯಲ್ಲಿ ಅಬ್ದುಲ್ ರೌಫ್ ಹಲವರಿಂದ ಉಂರ ವಿಸಾ ಭರವಸೆಯೊಡ್ಡಿ ೮೦ ಸಾವಿರ ರೂಪಾಯಿಯಿಂದ ಒಂದು ಲಕ್ಷ ರೂ. ವರೆಗೆ ಪಡೆದಿದ್ದಾನೆನ್ನಲಾಗಿದೆ. ಹಣ ನೀಡಿದವರಲ್ಲಿ ಪ್ರಯಾಣಕ್ಕೆ ಬೇಕಾದ ಸಿದ್ಧತೆಗಳೊಂದಿಗೆ ಕರಿಪ್ಪೂರ್ ವಿಮಾನ ನಿಲ್ದಾಣಕ್ಕೆ ತಲುಪಬೇಕೆಂದು ಈತ ತಿಳಿಸಿದ್ದನು. ಅದರಂತೆ ಹಣ ನೀಡಿದವರೆಲ್ಲರೂ ಪ್ರಯಾಣಕ್ಕಾಗಿ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಆದರೆ ಅಬ್ದುಲ್ ರೌಫ್ನನ್ನು ಅಲ್ಲಿ ಕಾಣದ ಹಿನ್ನೆಲೆಯಲ್ಲಿ ಮೊಬೈಲ್ ಫೋನ್ಗೆ ಕರೆಮಾಡಿದಾಗ ಅದು ಸ್ವಿಚ್ ಆಫ್ ಆಗಿರುವುದಾಗಿ ತಿಳಿದುಬಂದಿದೆ. ಇದರಿಂದ ವಂಚನೆಗೀಡಾಗಿರುವ ವಿಷಯ ಹಣ ನೀಡಿದವರ ಗಮನಕ್ಕೆ ಬಂದಿದೆ. ಊರಿಗೆ ಮರಳಿದ ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ವೇಳೆ ಅಬ್ದುಲ್ ರೌಫ್ ತನಗೆ ಹಣ ನೀಡಿದ ೧೪ ಮಂದಿಯ ಪಾಸ್ಪೋರ್ಟ್ ಗಳೊಂದಿಗೆ ತಲೆಮರೆಸಿಕೊಂ ಡಿರುವುದಾಗಿ ದೂರಲಾಗಿದೆ. ಈತನನ್ನು ಪತ್ತೆಹಚ್ಚಲು ಸೈಬರ್ಸೆಲ್ನ ಸಹಾಯದೊಂದಿಗೆ ತನಿಖೆ ತೀವ್ರಗೊಳಿಸಲಾಗಿದೆ.