ಉತ್ತರ ವಲಯ ಪುರುಷ- ಮಹಿಳಾ ಹಗ್ಗಜಗ್ಗಾಟ ಪಂದ್ಯ

ಹೊಸದುರ್ಗ: ಆಶ್ವಾಸ್ ಪಟ್ಟೇನ ಇದರ ನೇತೃತ್ವದಲ್ಲಿ ಉತ್ತರ ವಲಯ ಪುರುಷ- ಮಹಿಳಾ ತಂಡಗಳ ಹಗ್ಗಜಗ್ಗಾಟ ಪಂದ್ಯ ಇಂದು ನೀಲೇಶ್ವರದಲ್ಲಿ ನಡೆಯಲಿದೆ. ಕಣ್ಣೂರು, ಕಾಸರಗೋಡು ಜಿಲ್ಲೆಗಳ ೧೦ ಮಹಿಳಾ ತಂಡಗಳು, ೨೫ ಪುರುಷ ತಂಡಗಳು ಭಾಗವಹಿಸಲಿವೆ. ಸಂಜೆ ೭ ಗಂಟೆಗೆ ಶಾಸಕ ಎಂ. ರಾಜಗೋಪಾಲ್ ಉದ್ಘಾಟಿಸುವರು. ರಾಷ್ಟ್ರೀಯ ಕ್ರೀಡಾತಾರೆ ಕೆ.ಸಿ. ಗಿರೀಶನ್ ಭಾಗವಹಿಸುವರು. ನೀಲೇಶ್ವರ ಹಾಗೂ ಸಮೀಪ ನಿವಾಸಿಗಳಾದ ಹಿರಿಯ ಕ್ರೀಡಾತಾರೆಗಳನ್ನು ಗೌರವಿಸಲಾಗುವುದು. ಅಲ್ಲದೆ ಪಾಲಿಯೇಟಿವ್ ಉಪಕರಣಗಳ ವಿತರಣೆ ನಡೆಯಲಿದೆ.

ಪಂದ್ಯದಲ್ಲಿ ಗೆಲುವು ಸಾಧಿಸುವ ಪುರುಷ ತಂಡಗಳಿಗೆ ಯಥಾಕ್ರಮ ರೂ. ೧೨೦೨೪,  ರೂ. ೮೦೨೪, ರೂ. ೫೦೨೪, ರೂ. ೩೦೨೪ ಹಾಗೂ ಟ್ರೋಫಿ, ಮಹಿಳಾ ತಂಡಗಳಿಗೆ ರೂ. ೬೦೨೪, ರೂ. ೪೦೨೪, ರೂ.೩೦೨೪, ರೂ. ೨೦೨೪ ಹಾಗೂ ಟ್ರೋಫಿ ನೀಡಲಾಗುವುದೆಂದು ಸಂಬಂಧ ಪಟ್ಟವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page