ಉದುಮದ ಕಾಂಗ್ರೆಸ್ ಮುಖಂಡ ನಿಧನ
ಕಾಸರಗೋಡು: ಉದುಮದ ಕಾಂಗ್ರೆಸ್ ಮುಖಂಡ ಹೃದಯಾಘಾ ತದಿಂದ ನಿಧನ ಹೊಂದಿದರು. ಉದುಮ ಮಂಡಲ ಕಾಂಗ್ರೆಸ್ ಮಾಜಿ ಸೆಕ್ರೆಟರಿ, ಮಂಡಲ ಯೂತ್ ಕಾಂಗ್ರೆಸ್ ಮಾಜಿ ಸೆಕ್ರೆಟರಿಯಾಗಿದ್ದ ಮೇಲ್ಬಾರ ಕಿಳಕ್ಕೇಕರೆ ಸಿ. ಅರವಿಂದಾಕ್ಷನ್ (44) ಮೃತಪಟ್ಟವರು. ನಿನ್ನೆ ರಾತ್ರಿ ಎದೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ಮಧ್ಯೆ ನಿಧನ ಸಂಭವಿಸಿದೆ.
ಫುಟ್ಬಾಲ್ ಆಟಗಾರನಾಗಿದ್ದರು. ದಿ| ಕರುವನ್- ಮಾಣಿಕ್ಕ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುನಿತ, ಮಕ್ಕಳಾದ ಅನ್ಮಿ ಅರವಿಂದ್, ಸಾನ್ವಿ ಅರವಿಂದ್, ಸಹೋದರ ಸಿ. ವಿನೋದ್, ಸಹೋದರಿಯರಾದ ಸುಲೋಚನ, ಸುಗಂಧಿ, ಸುನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.