ಕೈ ನರ ಕತ್ತರಿಸಿ ಆತ್ಮಹತ್ಯೆಗೆತ್ನಿಸಿದ ಯುವತಿ ಆಸ್ಪತ್ರೆಯಲ್ಲಿ ಸಾವು

ಕುಂಬಳೆ: ವಾಸಸ್ಥಳದಲ್ಲಿ ಕೈಯ ನರ ಕತ್ತರಿಸಿ ಆತ್ಮಹತ್ಯೆಗೆತ್ನಿಸಿದ  ಯುವತಿ ಮೃತಪಟ್ಟಳು. ಕುಂಬಳೆಯ ಬಾಡಿಗೆ ಕಟ್ಟಡವೊಂದರಲ್ಲಿ ವಾಸಿಸುವ  ಶೋಭಲತಾ (37) ಎಂಬಾಕೆ ಸಾವಿಗೀಡಾದ ಯುವತಿ.  ಕಳೆದ ಆದಿತ್ಯವಾರ ಶೋಭಲತ ವಾಸಸ್ಥಳದಲ್ಲಿ ಕೈಯ ನರ ಕತ್ತರಿಸಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಮಧ್ಯೆ ನಿನ್ನೆ ಸಾವು ಸಂಭವಿಸಿದೆ. ಘಟನೆ ಕುರಿತು ಕುಂಬಳೆ  ಪೊಲೀಸರು ತನಿಖೆ ಆರಂಭಿಸಿರುವುದಾಗಿ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.

RELATED NEWS

You cannot copy contents of this page