ಉದ್ಯಾವರ ಮಾಡ ಕ್ಷೇತ್ರ ವಾರ್ಷಿಕೋತ್ಸವ ಸಮಾಪ್ತಿ

ಮಂಜೇಶ್ವರ: ಉದ್ಯಾವರ ಅರಸು ಮಂಜೀಷ್ಣಾರ್ ಅಣ್ಣತಮ್ಮ ದೈವಗಳ ಕ್ಷೇತ್ರದ ಜಾತ್ರೆ ನಿನ್ನೆ ಸಮಾಪ್ತಿಗೊಂಡಿತು. ಹಿಂದೂ ಮುಸ್ಲಿಂ ಭಾವೈಕ್ಯದ ಸಂಕೇತದೊಂ ದಿಗೆ ಕಳೆದ 800 ವರ್ಷಗಳಿಂದ ಸಂಪ್ರದಾಯಬದ್ಧವಾಗಿ ನಡೆಯುತ್ತಿರುವ ಉದ್ಯಾವರ ಶ್ರೀ ಅರಸು ದೈವಗಳ ವಾರ್ಷಿಕ ಉತ್ಸವಕ್ಕೆ ಈ ಬಾರಿಯೂ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಸಂಪ್ರದಾಯದಂತೆ ಕಟ್ಟೆಯ ಒಂದು ಭಾಗದಲ್ಲಿ ಹಿಂದೂ ಬಾಂಧವರು ಹಾಗೂ ಇನ್ನೊಂದು ಭಾಗದಲ್ಲಿ ಮುಸ್ಲಿಂ ಬಾಂಧವರು ಕುಳಿತುಕೊಂಡು ಉತ್ಸವ ವೀಕ್ಷಿಸಿದರು. ಉತ್ಸವದಂಗವಾಗಿ ಕುಂಜತ್ತೂರು ಅಂಡರ್‌ಪಾಸ್‌ನಲ್ಲಿ ವಾಹನ ದಟ್ಟಣೆ ಉಂಟಾಗಿ ಸಂಚಾರ ಅಸ್ತವ್ಯಸ್ತಗೊಂಡಿತು. ಈ ವೇಳೆ ಸಮಾಜಸೇವಕರಾದ ಅಕ್ಬರ್, ಸಮದ್‌ರ ನೇತೃತ್ವದಲ್ಲಿ ವಾಹನ ಸಂಚಾರ ಸುಗಮಗೊಳಿಸಲು ಪ್ರಯತ್ನಿಸಿದರು.

Leave a Reply

Your email address will not be published. Required fields are marked *

You cannot copy content of this page