ಉದ್ಯೋಗ ಖಾತರಿ: ಕುಟುಂಬಶ್ರೀ ಕಾರ್ಯಕರ್ತರು ಸರಕಾರದ ಗುಲಾಮರಲ್ಲ-ಕೆ.ಶ್ರೀಕಾಂತ್
ಬದಿಯಡ್ಕ: ಇತ್ತೀಚೆಗೆ ನಡೆದ ನವಕೇರಳ ಸಭೆಯಲ್ಲಿ ಪಾಲ್ಗೊಳ್ಳದೇ ಇರುವ ಉದ್ಯೋಗಖಾತರೀ ಯೋಜನೆಯ ಮಹಿಳಾ ಕಾರ್ಮಿಕರ ಮೇಲೆ ಪ್ರತೀಕಾರ ಕ್ರಮಕೈಗೊಳ್ಳಲು ಮುಂದಾದ ರಾಜ್ಯ ಸರಕಾರದ ಕ್ರಮಕ್ಕೆ ಅವಕಾಶ ನೀಡುವುದಿಲ್ಲ. ಉದ್ಯೋಗ ಖಾತರಿ ಕೆಲಸಗಾರರು ಮತ್ತು ಕುಟುಂಬಶ್ರೀ ಕಾರ್ಯಕರ್ತರು ಪಿಣರಾಯಿ ಸರಕಾರದ ಗುಲಾಮರಲ್ಲ. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದು, ಭಾಗವಹಿಸದೇ ಇರುವುದು ಅವರವರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದರಲ್ಲಿ ಪಿಣರಾಯಿ ಸರಕಾರವು ತಲೆತೂರಿಸುವುದು ಬಡವರ ಬಡತನವನ್ನು ಶೋಷಣೆ ಮಾಡಿದಂತೆ. ಭಾಗವಹಿಸದ ಕೆಲಸಗಾರರು ಹಾಗೂ ಕುಟುಂಬಶ್ರೀ ಕಾರ್ಯಕರ್ತೆಯರ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿ ಇದರ ವಿರುದ್ಧ ತೀವ್ರ ಹೋರಾಟ ನಡೆಸಲಿದೆ ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ಕೆ.ಶ್ರೀಕಾಂತ್ ಹೇಳಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಿನ್ನೆ ಬದಿಯಡ್ಕ ಪಂಚಾಯಿತ್ ಬಿಜೆಪಿ ಜನಪ್ರತಿನಿದಿsಗಳು ನಡೆಸಿದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರ ಬುಡಮೇಲು ಮಾಡುತ್ತಿದೆ ಎಂಬ ಎಡಪಕ್ಷಗಳ ಅಪಪ್ರಚಾರ ನಿರಾಧಾರ. ಎರಡನೇ ಯುಪಿಎ ಸರಕಾರದ ಅವ ಯಲ್ಲಿ ಕಾಂಗ್ರೆಸ್ ಸರಕಾರ ಉದ್ಯೋಗ ಖಾತರಿ ಯೋಜನೆಗೆ ಒಟ್ಟು 1.61 ಲಕ್ಷ ಕೋಟಿ ರೂ. ನೀಡಿದೆ. ಆದರೆ ಮೋದಿ ಸರಕಾರ ಕಳೆದ ಐದು ವರ್ಷಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ 3.71 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದರು. ಡಿ.ಶಂಕರ ಅಧ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮಪಂಚಾಯಿತ್ ಕಾರ್ಯದರ್ಶಿಯು ಏಕಪಕ್ಷೀಯ ನಿರ್ಧಾರಗಳ ಮೂಲಕ ಮುಂದುವರಿಯುತ್ತಿರುವುದು ಖಂಡನೀಯ ಎಂದರು. ಅಗತ್ಯವುಳ್ಳ ಉದ್ಯೋಗಸ್ಥರೂ ಇಲ್ಲದೆ ಪಂಚಾಯಿತ್ ಕಾರ್ಯಗಳ ಸ್ಥಂಭನಾವಸ್ಥೆಯಲ್ಲಿದೆ ಎಂದು ಆರೋಪಿಸಿದರು. ಬಾಲಕೃಷ್ಣ ಶೆಟ್ಟಿ ಕಡಾರು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯಿತ್ ಸದಸ್ಯೆ ಶೈಲಜಾ ಭಟ್, ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಮಂಡಲ ಕಾರ್ಯದರ್ಶಿ ಗೋಪಾಲಕೃಷ್ಣ ಮುಂಡೋಳುಮೂಲೆ, ಬಿಜೆಪಿ ಮುಖಂಡ ಅವಿನಾಶ್ ರೈ, ಜನಪ್ರತಿನಿದಿsಗಳಾದ ಅಶ್ವಿನಿ ಕೆ.ಎಂ., ಜಯಂತಿ ಕುಂಟಿಕಾನ, ಶುಭಲತಾ ರೈ, ಸ್ವಪ್ನಾ, ಈಶ್ವರ ಮಾಸ್ತರ್ ಪೆರಡಾಲ, ಸೌಮ್ಯಾ ಮಹೇಶ್ ನಿಡುಗಳ, ಅನಿತಾ ಪಾಲ್ಗೊಂಡಿದ್ದರು.