ಉದ್ಯೋಗ ಭರವಸೆಯೊಡ್ಡಿ ಯುವತಿಯ ೧೦,೩೦,೨೦೦ ರೂ. ವಂಚನೆ

ಮಂಜೇಶ್ವರ: ತಾತ್ಕಾಲಿಕ ಉದ್ಯೋಗ ಭರವಸೆಯೊಡ್ಡಿ ಯುವತಿಯಿಂದ ೧೦,೩೦,೨೦೦ ರೂಪಾಯಿ ವಂಚಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಹೊಸಬೆಟ್ಟು ವಿಲ್ಲೇಜ್‌ನಲ್ಲಿ ಗೋವಿಂದ ಪೈ  ಕಾಲೇಜು ಬಳಿಯ ಮಧುರಿಮ ವಿನೋದ್‌ರ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಪರಿಚಯಗೊಂಡ ವ್ಯಕ್ತಿ ಹೆಚ್ಚು ವೇತನವುಳ್ಳ ತಾತ್ಕಾಲಿಕ ಉದ್ಯೋಗದ ಭರವಸೆಯೊಡ್ಡಿದ್ದಾನೆನ್ನಲಾಗಿದೆ. ಉದ್ಯೋಗಕ್ಕಾಗಿ ದೂರುದಾತೆ ಕಳೆದ ಜುಲೈ ೧ರಿಂದ ೧೩ವರೆಗಿನ ದಿನಗಳಲ್ಲಾಗಿ ೧೦,೩೦,೨೦೦ ರೂಪಾಯಿ ಪಾವತಿಸಿದ್ದಾಳೆ. ಆದರೆ ಅನಂತರ ಉದ್ಯೋಗದ ಯಾವುದೇ ಸಾಧ್ಯತೆ ಇಲ್ಲದಾದ್ದರಿಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.

RELATED NEWS

You cannot copy contents of this page