ಉಪ್ಪಳದಲ್ಲಿ ಎ.ಟಿ.ಎಂಗೆ ತುಂಬಿಸಲು ತಂದ ಹಣ ಕಳವುಗೈದಿರುವುದು ‘ತಿರುಟ್’ ತಂಡ

ಉಪ್ಪಳ: ಉಪ್ಪಳದ ಖಾಸಗಿ ಬ್ಯಾಂ ಕ್‌ನ ಎಟಿಎಂಗೆ ಹಣ ತುಂಬಿಸಲೆಂದು   ಬಂದ ವಾಹನದಿಂ ದ ಮಾರ್ಚ್ ೨೭ ರಂದು ಹಾಡಹ ಗಲೇ ೫೦ ಲಕ್ಷ ರೂ. ಕಳವುಗೈದಿ ರುವುದು ತಮಿಳುನಾಡಿನ ‘ತಿರುಟ್’ ತಂಡಕ್ಕೆ ಸೇರಿದವರಾಗಿದ್ದಾ ರೆಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

ಈ ತಂಡದಲ್ಲಿ ಸುಮಾರು ೩೦ ಮಂದಿ ಒಳಗೊಂಡಿದ್ದಾರೆ. ಇವರು ಕಳವು, ದರೋಡೆ ಮಾತ್ರವಲ್ಲ ಅಕ್ರಮ ಸ್ಪಿರಿಟ್ ಸಾಗಾಟ ದಂಧೆಯನ್ನೂ ಹೊಂ ದಿದ್ದಾರೆ. ಹೀಗೆ ಅಡ್ಡ ದಾರಿ ಮೂಲಕ ಲಭಿಸುವ ಹಣವನ್ನು ಉಪಯೋಗಿಸಿ ಐಶಾರಾಮಿ ಜೀವನ ಸಾಗಿಸುವುದು ಇವರ ರೀತಿಯಾಗಿದೆ. ಇವರು ಒಂದೇ ಸ್ಥಳದಲ್ಲಿ ಖಾಯಂ ಆಗಿ ನೆಲೆಗೊಳ್ಳದೆ ಅಲೆಮಾರಿಗಳಾಗಿ ಜೀವಿಸುವ ತಂಡದವರಾಗಿದ್ದಾರೆ. ಒಂದು ಸ್ಥಳದಲ್ಲಿ ಕಳವು ಅಥವಾ ದರೋಡೆ ನಡೆಸಿದ ಬಳಿಕ ಅಲ್ಲಿ ನಿಲ್ಲದೆ ಆ ಪ್ರದೇಶವನ್ನು ಅವರು ತಕ್ಷಣ ಖಾಲಿಮಾಡುತ್ತಾರೆ. ಆದ್ದರಿಂದ ಈ ಕಳವು ತಂಡದವರನ್ನು ಬಂಧಿಸುವುದು ಅಷ್ಟೊಂದು ಸುಲಭಸಾಧ್ಯ ವಲ್ಲವೆಂದು ಪೊಲೀಸರು ಹೇಳುತ್ತಿದ್ದಾರೆ.

ಕಳವು ಅಥವಾ ದರೋಡೆ ನಡೆಸುವ  ಪ್ರದೇಶಗಳಿಗೆ ಮೊದಲೇ ಆಗಮಿಸಿ ಆ ಪ್ರದೇಶವನ್ನು ಕೂಲಂಕುಷವಾಗಿ ಪರಿಶೀಲಿಸಿ ಅದಕ್ಕೆ ಹೊಂದಿಕೊಂಡು ಅಗತ್ಯದ ಸ್ಕೆಚ್ ತಯಾರಿಸಿ ಅದರಂತೆ ಬಳಿಕ ಅಕ್ರಮ ಕೃತ್ಯ ನಡೆಸುವುದು ಇವರ ರೀತಿಯಾಗಿದೆಯೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ.

ಉಪ್ಪಳದಲ್ಲಿ ಕಳವು ನಡೆದು ಇಂದಿಗೆ ೯ ದಿನ ಕಳೆದರೂ ಕಳ್ಳರನ್ನು ಪತ್ತೆಹಚ್ಚಿ ಬಂಧಿಸಲು ಪೊಲೀಸರಿಗೆ ಈತನಕ ಸಾಧ್ಯವಾಗಿಲ್ಲ.  ಉಪ್ಪಳದಲ್ಲಿ ಕಳವು ನಡೆಸಿದ ಕಳ್ಳರ ದೃಶ್ಯ ಆ ಪ್ರದೇಶದ ಹಲವು ಸಿಸಿ ಟಿವಿ ಕ್ಯಾಮರಾಗಳಿಂದ ಪೊಲೀಸರಿಗೆ ಲಭಿಸಿದೆ. ಈ ತಂಡ ಮಂ ಗಳೂರಿನಿಂದ ಬಂದು ಕಳವು ನಡೆಸಿದ ಬಳಿಕ ಆಟೋ ರಿಕ್ಷಾದಲ್ಲಿ ಅಲ್ಲಿಂದ ಕಾಸರಗೋಡು ರೈಲು ನಿಲ್ದಾಣಕ್ಕೆ ಬಂದಿದ್ದರೆಂಬ ಮಾಹಿತಿಯೂ ಪೊಲೀಸರಿಗೆ ಲಭಿಸಿದೆ. ಆದರೆ ಕಾಸರಗೋಡಿನಿಂದ ರೈಲಿನಲ್ಲಿ  ಬಳಿಕ ಎಲ್ಲಿಗೆ ಹೋದರೆಂಬ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿಲ್ಲ. ಆದ್ದರಿಂದ ಈ ಪ್ರಕರಣದ ತನಿಖೆಗಾಗಿ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರ ಸಹಾಯವನ್ನು ಕಾಸರ ಗೋಡು ಪೊಲೀಸರು ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page