ಉಪ್ಪಳದಲ್ಲಿ ಕಟ್ಟಡದ ಕಾವಲುಗಾರನನ್ನು ಇರಿದು ಕೊಲೆ: ಪರಾರಿಯಾದ ಆರೋಪಿಗಾಗಿ ತೀವ್ರ ಶೋಧ
ಉಪ್ಪಳ: ಉಪ್ಪಳದಲ್ಲಿ ಕಟ್ಟಡದ ಕಾವಲುಗಾರನನ್ನು ವ್ಯಕ್ತಿಯೋರ್ವ ಇರಿದು ಕೊಲೆಗೈದ ಘಟನೆ ನಿನ್ನೆ ರಾತ್ರಿ ನಡೆದಿದೆ. ಇದೇ ವೇಳೆ ಘಟನೆ ಬಳಿಕ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಪಯ್ಯನ್ನೂರು ಕಾರಮ್ಮಲ್ ಈಸ್ಟ್ ಎಡಕ್ಕೇ ವೀಟಿಲ್‌ನ ಸುರೇಶ್ ಕುಮಾರ್ (48) ಎಂಬವರು ಕೊಲೆಗೀಡಾದ ವ್ಯಕ್ತಿಯಾಗಿದ್ದಾರೆ. ಪತ್ವಾಡಿ ನಿವಾಸಿ ಸವಾದ್ (23) ಎಂಬಾತ ಈ ಕೊಲೆ ನಡೆಸಿದ್ದು, ಈತನಿಗಾಗಿ ಶೋಧ ಆರಂ ಭಿಸಿರುವುದಾಗಿ ಮಂಜೇಶ್ವರ ಪೊಲೀಸರು ತಿಳಿಸಿದ್ದಾರೆ.
ನಿನ್ನೆ ರಾತ್ರಿ 10ಗಂಟೆ ವೇಳೆ ಘಟನೆ ನಡೆದಿದೆ. ಉಪ್ಪಳ ಬಸ್ ನಿಲ್ದಾಣ ಮೀನು ಮಾರ್ಕೆಟ್ ಸಮೀಪ ಸುರೇಶ್ ಕುಮಾರ್ ಹಾಗೂ ಸವಾದ್ ಮಧ್ಯೆ ವಾಗ್ವಾದ ಉಂಟಾಗಿತ್ತೆನ್ನಲಾಗಿದೆ. ಕೂಡಲೇ ಸುರೇಶ್‌ಕುಮಾರ್‌ಗೆ ಸವಾದ್ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡು ನೆಲದಲ್ಲಿ ಬಿದ್ದಿದ್ದ ಸುರೇಶ್ ಕುಮಾರ್‌ರನ್ನು ಪೊಲೀಸರು ಹಾಗೂ ನಾಗರಿಕರು ಸೇರಿ ಮೊದಲು ಉಪ್ಪಳದ ಆಸ್ಪತ್ರೆಗೆ ತಲುಪಿಸಿದ್ದಾರೆ. ಸ್ಥಿತಿ ಗಂಭೀರವಾಗಿದ್ದುದರಿಂದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂ ಡೊಯ್ದಿದ್ದು, ಆಸ್ಪತ್ರೆಗೆ ತಲುಪು ವಷ್ಟರಲ್ಲಿ ಸುರೇಶ್ ಕುಮಾರ್ ಸಾವಿಗೀಡಾಗಿದ್ದಾರೆ. ಮೃತದೇಹ
ವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿರಿಸಲಾಗಿದೆ. ಇಂದು ಊರಿನಿಂದ ಸಂಬಂಧಿಕರು ತಲುಪಿದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ತಿಳಿದುಬಂದಿದೆ.
ಕಳೆದ ಎರಡು ವರ್ಷಗಳಿಂದ ಸುರೇಶ್ ಕುಮಾರ್ ಉಪ್ಪಳದಲ್ಲಿ ನಿರ್ಮಾಣ ಕಾರ್ಮಿಕನಾಗಿದ್ದರು. ಅಲ್ಲ್ಲದೆ ರಾತ್ರಿ ಹೊತ್ತಿನಲ್ಲಿ ಉಪ್ಪಳದಲ್ಲಿ ನಿರ್ಮಾಣ ಹಂತದ ಫ್ಲಾಟ್‌ವೊಂದರ ಕಾವಲು ಗಾರನಾಗಿಯೂ ಕೆಲಸ ನಿರ್ವಹಿಸು ತ್ತಿದ್ದರು. ಸುರೇಶ್ ಕುಮಾರ್ ಹಾಗೂ ಆರೋಪಿ ಸವಾದ್ ಪರಿಚಯಸ್ಥರಾಗಿದ್ದು, ಕೆಲವೊಮ್ಮೆ ಅವರಿಬ್ಬರು ಪೇಟೆಯಲ್ಲಿ ಜೊತೆಯಾಗಿರುತ್ತಿದ್ದರೆನ್ನಲಾಗಿದೆ. ಆದರೆ ಸುರೇಶ್ ಕುಮಾರ್‌ರನ್ನು ಕೊಲೆಗೈಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ.
ಸುರೇಶ್ ಕುಮಾರ್‌ಗೆ ಇರಿದು ಗಂಭೀರ ಗಾಯಗೊಳಿಸಿದ ತಕ್ಷಣ ಸವಾದ್ ಪರಾರಿಯಾಗಿದ್ದಾನೆ. ಈ ಹಿಂದೆ ಎರಡು ಗಾಂಜಾ ಪ್ರಕgಣ ಹಾಗೂ ಉಪ್ಪಳದಿಂದ ಆಂಬುಲೆನ್ಸ್ ಕಳವುಗೈದ ಪ್ರಕರಣದಲ್ಲಿ ಸವಾದ್ ಆರೋಪಿಯಾಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ತಕ್ಷಣ ಡಿವೈಎಸ್ಪಿ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ಆರೋಪಿಗಾಗಿ ತೀವ್ರಶೋಧ ಕಾರ್ಯಾಚರಣೆಗೆ ಚಾಲನೆ ನೀಡಿದ್ದಾರೆ.