ಉಪ್ಪಳ ಬಳಿ ಚಿರತೆ ಪ್ರತ್ಯಕ್ಷ ವದಂತಿ
ಉಪ್ಪಳ: ನಯಾ ಬಜಾರ್ ಬಳಿಯ ಪಾರೆಕಟ್ಟೆಯಲ್ಲಿ ನಿನ್ನೆ ರಾತ್ರಿ ಚಿರತೆಯೊಂದು ಕಾಣಿಸಿಕೊಂ ಡಿರುವುದಾಗಿ ವರದಿಯಾಗಿದೆ. ರಾತ್ರಿ 12 ಗಂಟೆ ವೇಳೆ ಚಿರತೆಯನ್ನು ಹೋಲುವ ಪ್ರಾಣಿ ಕಾಣಿಸಿಕೊಂಡ ಬಗ್ಗೆ ವ್ಯಕ್ತಿಯೊಬ್ಬರು ನೀಡಿದ ಮಾಹಿತಿಯಂತೆ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ತಲುಪಿದ್ದಾರೆ. ಅವರು ನಾಗರಿಕರ ಸಹಾಯದೊಂದಿಗೆ ವಿವಿಧೆಡೆ ಹುಡು ಕಾಡಿದರೂ ಚಿರತೆಯನ್ನು ಪತ್ತೆಹಚ್ಚ ಲಾಗಲಿಲ್ಲ. ಶೋಧ ಮುಂದು ವರಿಸು ವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.