ಉಪ್ಪಳ ಶ್ರೀ ಅಯ್ಯಪ್ಪ ದೀಪೋತ್ಸವ ಆರಂಭ
ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ 52ನೇ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ ಇಂದು ಬೆಳಿಗ್ಗೆ ಆರಂಭಗೊAಡಿತು. ಗಣಹೋಮ, ಹರಿನಾಮ ಕೀರ್ತನೆ, ಭಜನಾ ಸಂಕೀರ್ತನೆ, ದೇವರಿಗೆ ಪಂಚಾಮೃತ ಅಭಿಷೇಕ, ಸೀಯಾಳಾಭಿಷೇಕ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ 4ರಿಂದ ಕುಣಿತ ಭಜನೆ, 6ರಿಂದ ಅಂಬಾರು ಶ್ರೀ ಸದಾಶಿವ ದೇವಸ್ಥಾನದಿಂದ ಪಾಲೆ ಕೊಂಬು ಮೆರವಣಿಗೆ, ನೃತ್ಯಸಂಗಮ, ರಾತ್ರಿ 8ರಿಂದ ಧಾರ್ಮಿಕ ಸಭೆ, 11ರಿಂದ ಶಬರಿಮಲೆ ಸ್ವಾಮಿ ಅಯ್ಯಪ್ಪ ಪೌರಾಣಿಕ ಯಕ್ಷಗಾನ,ರಾತ್ರಿ 12.30ರಿಂದ ದೀಪಾರಾಧನೆ, ಚೆಂಡೆಮೇಳ, 3ರಿಂದ ಶ್ರೀ ಅಯ್ಯಪ್ಪನ್ ಗೀತೆ, 3.45ರಿಂದ ಹಣತೆ ದೀಪ ಮೆರವಣಿಗೆ, ಪ್ರಾತಕಾಲ 5ರಿಂದ ಅಗ್ನಿಪೂಜೆ, 5.30ರಿಂದ ಶ್ರೀ ಅಯ್ಯಪ್ಪನ್ ಮತ್ತು ವಾವರ ಯುದ್ದ ಕಾರ್ಯಕ್ರಮಗಳು ನಡೆಯಲಿದೆ.