ಉಪ್ಲೇರಿ: ಆಮಂತ್ರಣ ಪತ್ರಿಕೆ ಬಿಡುಗಡೆ
ಬದಿಯಡ್ಕ: ಉಪ್ಲೇರಿ ವಾಂತಿ ಚಾಲು ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯಲ್ಲಿ ಐದು ವರ್ಷಗಳಿಗೊಮ್ಮೆ ನಡೆಯುವ ಕೋಲೋತ್ಸವ 2024 ಜನವರಿ 21ರಂದು ಜರಗಲಿದೆ. ಇದರ ಆಮಂತ್ರಣ ಪತ್ರಿಕೆಯನ್ನು ಶ್ರೀ ಸನ್ನಿಧಿಯಲ್ಲಿ ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ದೀಪ ಪ್ರಜ್ವಲನೆಗೆÀÆಳಿಸಿ ಬಿಡುಗಡೆ ಮಾಡಿದರು. ಪಂಚಾಯತ್ ಸದಸ್ಯ ಈಶ್ವರ ಮಾಸ್ತರ್ ಪೆರಡಾಲ ಅಧ್ಯಕ್ಷತೆ ವಹಿಸಿದರು. ಪಳ್ಳತ್ತಡ್ಕ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಅಧ್ಯಕ್ಷ ಉದಯಕೇಶವ ಭಟ್ ಅತಿಥಿಯÁಗಿ ಭಾಗವಹಿಸಿದರು. ಜಿಶನ್ ವಾಂತಿ ಚಾಲು ಪ್ರಾರ್ಥನೆ ಮಾಡಿದರು. ಗೋಪಾಲಕೃಷ್ಣ ಕುಲಾಲ್ ವಾಂತಿಚಾಲು ಸ್ವಾಗತಿಸಿದರು. ಜಯರಾಮ ಪಾಟಾಳಿ ಪಡುಮಲೆ, ಜಗನ್ನಾಥ ರೈ ಕೊರೆಕಾನ, ಸುಕುಮಾರ ಉಪ್ಲೇರಿ, ಕೃಷ್ಣ ಬೆಳ್ಚಪ್ಪಾಡ ಉಪ್ಲೇರಿ,ರಮೇಶ್ ಮುಳಿಯಡ್ಕ ಉಪಸ್ಥಿತರಿದ್ದರು. ರಾಮ ನಾಯ್ಕ ಕುಂಟಾಲುಮೂಲೆ ವಂದಿಸಿದರು.