ಉರ್ಮಿ ವಿಸಿಬಿ ಕಂ ಬ್ರಿಡ್ಜ್ ಪುನರ್ ನಿರ್ಮಾಣಕ್ಕೆ 1.23 ಕೋಟಿ ರೂ.ಗೆ ಆಡಳಿತಾನುಮತಿ; ಕಾಮಗಾರಿ ಶೀಘ್ರ- ಶಾಸಕ
ಪೈವಳಿಕೆ: ಜೀರ್ಣಾವಸ್ಥೆಯಲ್ಲಿದ್ದ ಉರ್ಮಿ ವಿಸಿಬಿ ಕಂ ಬ್ರಿಡ್ಜ್‌ನ ನಿರ್ಮಾಣಕ್ಕಾಗಿ 1.23 ಕೋಟಿ ರೂ.ಗಳ ಯೋಜನೆಗೆ ಆಡಳಿತಾನುಮತಿ ಲಭಿಸಿದೆ ಎಂದು ಶಾಸಕ ಎಕೆಎಂ ಅಶ್ರಫ್ ತಿಳಿಸಿದ್ದಾರೆ. ಪೈವಳಿಕೆ ಪಂಚಾಯತ್‌ನ ಕಡೆಂಕೋಡಿ ವಾರ್ಡ್‌ನ ಉರ್ಮಿ ತೋಡಿಗೆ ೪೦ ವರ್ಷಗಳ ಹಿಂದೆ ವಿಸಿಬಿ ಕಂ ಬ್ರಿಡ್ಜ್ ನಿರ್ಮಿಸಲಾಗಿತ್ತು. ಇದು ಶೋಚನೀಯಗೊಂಡ ಹಿನ್ನೆಲೆಯಲ್ಲಿ ಈ ದಾರಿಯಾಗಿ ಸಾರಿಗೆ ಸಂಚಾರ ನಿಷೇಧಿಸಲಾಗಿತ್ತು.
ಇದರಿಂದಾಗಿ ಉರ್ಮಿ, ಪಲ್ಲಕೂಡೇಲು, ಕೊಮ್ಮಂಗಳ, ಕುರುಡಪದವು ಎಂಬೀ ಪ್ರದೇಶಗಳ ಕೃಷಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಸಹಿತವಿರುವ ಸಾರ್ವಜನಿಕರು ಸಂಕಷ್ಟಕ್ಕೀ ಡಾಗಿದ್ದಾರೆ. ಈ ಪ್ರದೇಶದ ವಿವಿಧ ಕೃಷಿ ಸ್ಥಳಗಳಿಗಿರುವ ಜಲ ಲಭ್ಯತೆಯು ಮೊಟಕುಗೊಂಡಿತ್ತು. ಕಿರು ನೀರಾವರಿ ಇಲಾಖೆಯ ಪ್ಲಾನ್ ಫಂಡ್‌ನಿಂದ ವಿಸಿಬಿ ನಿರ್ಮಾಣಕ್ಕೆ ಈಗ ಮೊತ್ತ ಮಂಜೂರು ಮಾಡಲಾಗಿದೆ. ಟೆಂಡರ್ ಕ್ರಮಗಳನ್ನು ಪೂರ್ತಿಗೊಳಿಸಿ ಕಾಮಗಾರಿ ಕೂಡಲೇ ಆರಂಭಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಶಾಸಕರು ತಿಳಿಸಿದ್ದಾರೆ.