ಉಳಿಯತ್ತಡ್ಕ ಬಳಿಯ ಇನ್ನೊಂದು ಮನೆಯಲ್ಲಿ ಕಳವು

ಕಾಸರಗೋಡು: ಉಳಿಯತ್ತಡ್ಕ ಸಮೀಪದ ಶಿರಿಬಾಗಿಲಿನಲ್ಲಿ ಗಲ್ಫ್ ಉದ್ಯೋಗಿ ಅಬ್ದುಲ್ ಹ್ಯಾರಿಸ್ ಎಂಬವರ ಮನೆಯಿಂದ ೬.೫ ಪವನ್ ಚಿನ್ನದ ಒಡವೆ ಮತ್ತು ೪೦೦೦ ರೂ. ನಗದು ಕಳವುಗೈದ ಬೆನ್ನಲ್ಲೇ ಅಲ್ಲಿಗೆ ಸಮೀಪದ ಇನ್ನೊಂದು ಮನೆಯಲ್ಲೂ ಕಳವು ನಡೆದಿದೆ.

ಉಳಿಯತ್ತಡ್ಕಕ್ಕೆ ಸಮೀಪದ ಮಂಜತ್ತಡ್ಕದ ಸೈನಬಾ ಮೊಯ್ದೀನ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಇವರು ಮೊನ್ನೆ ಮನೆಗೆ ಬೀಗ ಜಡಿದು ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ನಿನ್ನೆ ಮನೆಗೆ ಹಿಂತಿರುಗುವುದರೊಳಗೆ ಮನೆಯಲ್ಲಿ ಕಳವು ನಡೆದಿದೆ. ಮನೆಯ ಬಾಗಿಲ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಕಪಾಟಿನೊಳಗೆ ಇರಿಸಲಾಗಿದ್ದ ಒಂದೂವರೆ ಪವನ್‌ನ ಚಿನ್ನದ ಒಡವೆ ಮತ್ತು ೩೫೦೦ ನಗದು ಅಪಹರಿಸಿದ್ದಾರೆ. ಮಾತ್ರವಲ್ಲ ಅಲ್ಲೇ ಪಕ್ಕದ ಇನ್ನೊಂದು ಮನೆಯಲ್ಲಿ ಕಳವು ಯತ್ನ ನಡೆದಿದೆ.

ಈ ಬಗ್ಗೆ ನೀಡಲಾದ ದೂರಿನಂತೆ ಕಾಸರಗೋಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳವು ನಡೆದ ಮನೆಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರೂ ಆಗಮಿಸಿ ಅಲ್ಲಿಂದ ಹಲವು ಬೆರಳಚ್ಚುಗಳನ್ನೂ ಸಂಗ್ರಹಿಸಿದ್ದಾರೆ.

ಒಂದರ ಹಿಂದೆ ಒಂದರಂತೆ ಕಳವು ನಡೆಯುತ್ತಿರುವುದು ಉಳಿಯತ್ತಡ್ಕ ಮತ್ತು ಪರಿಸರದ ಜನರನ್ನು ತೀವ್ರ ಕಳವಳಗೊಳಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page