ಉಳ್ಳಾಲದಲ್ಲಿ ಯುವಕನನ್ನು ಇರಿದು ಕೊಲೆ

ತಲಪ್ಪಾಡಿ: ಮದ್ಯಪಾನ ವೇಳೆ ಉಂಟಾದ ಜಗಳ ತಾರಕಕ್ಕೇರಿದ ಪರಿಣಾಮ ಯುವಕನೋರ್ವ ಇರಿತಕ್ಕೆ ಬಲಿಯಾದ ಘಟನೆ ನಡೆದಿದೆ.  ಉಳ್ಳಾಲ ಸರಸ್ವತಿ ಕಾಲನಿಯ ವರುಣ್ (೨೮) ಎಂಬವರು ಕೊಲೆಗೀಡಾದ ವ್ಯಕ್ತಿ. ಸೋಮೇಶ್ವರ ಬಳಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಒಟ್ಟಿಗೆ ಕುಳಿತು ಮದ್ಯ ಸೇವಿಸುತ್ತಿದ್ದಾಗ ಉಂಟಾದ ತರ್ಕದ ಹಿನ್ನೆಲೆಯಲ್ಲಿ  ಸೂರಜ್ ಎಂಬಾತ ಇರಿದು ಕೊಲೆಗೈದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ತಿಂಗಳ ೨೭ರಂದು ಉಳ್ಳಾಲ ನಗರಸಭೆಗೆ ಚುನಾವಣೆ ನಡೆಯಲಿರುವುದು. ಇದಕ್ಕೆ ಸಂಬಂಧಿಸಿ  ನಡೆದ ವಾಗ್ವಾದ ತಾರಕಕ್ಕೇರಿ ಅದು ಕೊಲೆಯಲ್ಲಿ ಪರ್ಯವಸಾನಗೊಂ ಡಿರುವುದಾಗಿ ತಿಳಿದುಬಂದಿದೆ.

Leave a Reply

Your email address will not be published. Required fields are marked *

You cannot copy content of this page