ಉಷ್ಣ ಅಲೆ: ಕಾಸರಗೋಡಿನಲ್ಲಿ ಓರ್ವ ಸಾವು; ಎಲ್ಲೆಡೆ ಜಾಗ್ರತಾ ನಿರ್ದೇಶ

ಕಾಸರಗೋಡು: ಬೇಸಿಗೆ ಕಾಲದ ಬಿಸಿಲ ಝಳ ದಿನೇ ದಿನೇ ಹೆಚ್ಚಾಗುತಿ ರುವ ಜೊತೆಗೇ ಕಾಸರಗೋಡಿನಲ್ಲಿ ಉಷ್ಣ ಅಲೆಯೂ ಬೀಸತೊಡಗಿದೆ.

ಉಷ್ಣ ಅಲೆಯ ಪರಿಣಾಮ ಎಂದು ಶಂಕಿಸಲಾಗುತ್ತಿರುವ  ವಲಸೆ ಕಾರ್ಮಿಕ ನೋರ್ವ ಮೃತಪಟ್ಟಿದ್ದಾರೆ. ಮೃತರು ಕರ್ನಾಟಕ ಹಾವೇರಿ ಜಿಲ್ಲೆಯ ಸಾವ ನ್ನೂರು ತಾಲೂಕಿನ ಶಿರಿಬಿದಿಗೆ ಚಂದ್ರಪ್ಪ ಎಂಬವರ ಪುತ್ರ  ರುದ್ರಪ್ಪ  ಲಮಾನಿ (೪೫) ಎಂದು ಗುರುತಿಸಲಾಗಿದೆ. ಇವರು ಕಾಸರಗೋಡಿನಲ್ಲಿ ಕಳೆದ ೯ ವರ್ಷದಿಂದ ನಿರ್ಮಾಣ ಕಾರ್ಮಿಕನಾಗಿ ದುಡಿಯುತ್ತಿ ದ್ದರು. ಕಾಸರಗೋಡು ಜೆಪಿ ಕಾಲನಿಯ ಖಾಸಗಿ ಕ್ವಾರ್ಟರ್ಸ್‌ವೊಂದರಲ್ಲಿ ಇವರು ವಾಸಿಸುತ್ತಿದ್ದರು. ನಿನ್ನೆ ಸಂಜೆ ಕ್ವಾರ್ಟರ್ಸ್ ಬಳಿಯ ರಸ್ತೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದನ್ನು ಕಂಡ ಇತರರು ಸೇರಿ  ಜನರಲ್ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ.

ಉಷ್ಣ ಅಲೆಯ ಪರಿಣಾಮವೇ ಇವರ ಸಾವಿಗೆ ಕಾರಣವೆನ್ನಲಾಗಿದೆ. ಆದರೆ ಮರಣೋತ್ತರ ವರದಿ ಲಭಿಸಿದ ಬಳಿಕವಷ್ಟೇ ಸಾವಿನ ಸ್ಪಷ್ಟ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದ್ದಾರೆ. ಮೃತರು ತಾಯಿ ಗಂಗವ್ವ, ಪತ್ನಿ ಶಾಂತವ್ವ, ಮಕ್ಕಳಾದ ಅನಿತಾ, ಸವಿತಾ, ಸಹೋದರ ಹೆಮ್ಲಪ್ಪ ಮತ್ತು ಪುರುಷಪ್ಪ ಎಂಬವರನ್ನು ಅಗಲಿದ್ದಾರೆ.

 ಉರಿ ಉಷ್ಣದ ಜತೆಗೆ ಉಷ್ಣ ಅಲೆಯೂ ಬೀಸಲಾರಂಭಿಸಿದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಭಾರೀ ಜಾಗ್ರತಾ ನಿರ್ದೇಶವನ್ನೂ ಹೊರ ಡಿಸಿದೆ. ಇದರಂತೆ ಅಂಗನವಾಡಿಗಳಿಗೆ ಮೊನ್ನೆಯಿಂದ ರಜೆ ಸಾರಲಾಗಿದೆ. ಕಾರ್ಮಿಕ ದುಡಿಮೆಯನ್ನು ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆ ತನಕ ಕಾರ್ಮಿಕ ಇಲಾಖೆಯೂ ಇನ್ನೊಂದೆಡೆ ಕ್ರಮೀಕರಿಸಿದೆ. ಮಾತ್ರವಲ್ಲ ಬೆಳಿಗ್ಗೆ ೧೦ರಿಂದ ಸಂಜೆ ೪ ಗಂಟೆ ತನಕ ಎಲ್ಲಾ ರೀತಿಯ ಕ್ರೀಡಾ ತರಬೇತಿಗಳನ್ನೂ ತಾತ್ಕಾಲಿಕವಾಗಿ ಮುಂದೂಡುವಂತೆ ಕ್ರೀಡಾ ಸಚಿವ ಎ. ಅಬ್ದುಲ್ ರಹಿ ಮಾನ್ ಇನ್ನೊಂದೆಡೆ ನಿರ್ದೇಶ ನೀಡಿ ದ್ದಾರೆ. ನಿರ್ಜಲೀಕರಣಕ್ಕೆ ಕಾರಣ ವಾಗುವ ಮದ್ಯ, ಕಾರ್ಬೋಹೈಡ್ರೇಟ್ ಪಾನೀಯಗಳು, ಚಹಾ, ಕಾಫಿ ಇತ್ಯಾದಿಗಳ ಸೇವನೆಯನ್ನು ಹಗಲು ವೇಳೆ ಗರಿಷ್ಠ ಪ್ರಮಾಣದಲ್ಲಿ ಹೊರತುಪಡಿಸಬೇಕು. ವಿದ್ಯುತ್  ಉಪಕರಣಗಳನ್ನು ನಿರಂತರವಾಗಿ ಉಪಯೋಗಿಸುವು ದರಿಂದ ಅವುಗಳ ತಂತಿಗಳು ಬಿಸಿಯೇರಿ ಬೆಂಕಿ ಎದ್ದೇಳುವ ಸಾಧ್ಯತೆಯೂ ಇದೆ. ಆದ್ದರಿಂದ ಫ್ಯಾನ್, ಲೈಟ್, ಎಸಿ ಇತ್ಯಾದಿ ವಿದ್ಯುತ್ ಉಪ ಯೋಗದ ಬಳಿಕ ಆಫ್ ಮಾಡಿ ಇಡ ಬೇಕು. ಮನೆ ಕಚೇರಿಗಳು ಮೊದಲಾ ಡೆಗಳಲ್ಲಿ ವಾಯು ಸಂಚಾರಕ್ಕಾಗಿ ಕಿಟಿಕಿಯ ಬಾಗಿಲನ್ನು ಸದಾ ತೆಗೆದಿಡಬೇಕು. ಮಾರ್ಕೆಟ್ ಕಟ್ಟಡಗಳ ಪರಿಸರದಲ್ಲಿ ತ್ಯಾಜ್ಯವನ್ನು ರಾಶಿ ಹಾಕಿದಲ್ಲಿ ಅದಕ್ಕೆ ಬಿಸಿಲ ಬೇಗೆಯಿಂದ  ಬೆಂಕಿ ತಗಲುವಸಾಧ್ಯತೆ ಇದೆ. ಆದ್ದರಿಂದ  ಅವುಗಳನ್ನು ತಕ್ಷಣ ತೆರವುಗೊಳಿಸಬೇಕು. ವಿದ್ಯಾರ್ಥಿಗಳ ವಿಷಯದಲ್ಲಿ ಪೋಷಕರು ಗರಿಷ್ಠ ಜಾಗ್ರತೆ ವಹಿಸಬೇಕು. ಮಕ್ಕಳನ್ನು ಮತ್ತು ವಯೋಜನರು ಬಿಸಿಲಿಗೆ ಮೈಯೊಡ್ಡುವಿಕೆಯಿಂದ ಹೊರತುಪಡಿಸಬೇಕು. ಎಲ್ಲಾ ಕಾರ್ಯ ಕ್ರಮಗಳು ಸಂಜೆ ಬಳಿಕ ಮಾತ್ರವೇ ನಡೆಸಬೇಕು. ಗರ್ಭಿಣಿಯರು ಮತ್ತು ರೋಗಿಗಳು  ಈ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಪಾಲಿಸಬೇಕು. ರಾಜ್ಯದಲ್ಲಿ ಪಾಲ್ಘಾಟ್ ಮತ್ತು ಕಲ್ಲಿಕೋಟೆಯಲ್ಲಿ ತಾಪಮಾನ ಮಟ್ಟ ದಾಖಲೆಗೆ ತಲುಪಿದೆ.

Leave a Reply

Your email address will not be published. Required fields are marked *

You cannot copy content of this page