ಎಂಡಿಎಂಎ ಮಾರಾಟ: ಮಂಜೇಶ್ವರದ ಇಬ್ಬರು ಮಂಗಳೂರಿನಲ್ಲಿ ಸೆರೆ

ಮಂಜೇಶ್ವರ: ಮಾರಕ ಮಾದಕವಸ್ತುವಾದ ಎಂಡಿಎಂಎ ಮಾರಾಟಗೈಯ್ಯುತ್ತಿದ್ದ ಇಬ್ಬರು ಮಂಜೇಶ್ವರ ನಿವಾಸಿಗಳನ್ನು ಮಂಗಳೂರು ಸಿಬಿಐ ಪೊಲೀ ಸರು ಸೆರೆ ಹಿಡಿದಿದ್ದಾರೆ.

ಹೊಸಬೆಟ್ಟು ಗುಡ್ಡೆಕೇರಿ ನಿವಾಸಿ ಮುಸ್ತಫಾ (೩೮) ಕುಂಜತ್ತೂರು ಮಜಲಗುಡ್ಡೆ ನಿವಾಸಿಯೂ ಪ್ರಸ್ತುತ ಕೋಟೆಕಾರ್ ಬೀರಿ ಸರಕಾರಿ ಶಾಲೆ ಬಳಿ ವಾಸಿಸುತ್ತಿರುವ ಶಂಸುದ್ದೀನ್ ಎ (೩೮) ಎಂಬವನು ಬಂಧಿತ ವ್ಯಕ್ತಿಗಳಾಗಿದ್ದಾರೆ. ತಲಪಾಡಿ ಹೆದ್ದಾರಿ ಬಳಿ ನಿನ್ನೆ ಸಾರ್ವಜನಿಕರಿಗೆ ಎಂಡಿಎಂಎ ಮಾರಾಟ ಮಾಡುತ್ತಿದ್ದಾಗ ಈ ಇಬ್ಬರನ್ನು ಸೆರೆ ಹಿಡಿಯಲಾಗಿದೆ. ಬಂಧಿತ ಆರೋಪಿಗಳ ಕೈಯಿಂದ ೧೫ ಗ್ರಾಂ ಎಂಡಿಎಂಎ, ಡಿಜಿಟಲ್ ತಕ್ಕಡಿ ಹಾಗೂ ಮೊಬೈಲ್ ಫೋನ್‌ಗಳನ್ನು ವಶಪಡಿಸಲಾಗಿದೆ. ವಶಪಡಿಸಿಕೊಂಡ ಎಂಡಿಎಂಎಗೆ ೭೫ ಸಾವಿರ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆ. ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಲಭಿಸಿದ ಸೂಚನೆ ಮೇರೆಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪವನ್ ಅಗರ್‌ವಾಲ್ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page