ಎಂಡಿಎಂಎ ಸಹಿತ ಇಬ್ಬರ ಸೆರೆ
ಕಾಸರಗೋಡು: ವಿದ್ಯಾನಗರ ಪೊಲೀಸ್ ಠಾಣೆಯ ಎಸ್ಐ ಉಮ್ಮರ್ ಟಿ.ಕೆ. ಅವರ ನೇತೃತ್ವದ ಪೊಲೀಸರ ತಂಡ ಮಧೂರಿಗೆ ಸಮೀಪದ ಕಲ್ಲಕಟ್ಟದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಮಾದಕ ವಸ್ತುವಾದ 0.90 ಗ್ರಾಂ ಎಂಡಿಎಂಎ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ಶಿರಿ ಬಾಗಿಲು ಪಳ್ಳಂನ ಹಬೀಬ್ ಪಿ.ಐ. (30) ಮತ್ತು ಎರುದುಂಕಡವಿನ ಮೊಹಮ್ಮದ್ ಫಾಯೀಸ್ (23) ಎಂಬವರನ್ನು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇವರು ಸಂಚರಿಸುತ್ತಿದ್ದ ಆಟೋ ರಿಕ್ಷಾವನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕಾರ್ಯಾ ಚರಣೆ ನಡೆಸಿದ ಪೊಲೀಸರ ತಂಡದಲ್ಲಿ ಸಿಇಒಗಳಾದ ಸುಮೇಶ್ ಕುಮಾರ್ ಮತ್ತು ಅಜೇಶ್ ಎಂಬವರು ಒಳಗೊಂಡಿದ್ದಾರೆ.