ಎಂಡಿಎಂಎ ಸಹಿತ ಯುವಕನ ಸೆರೆ

ಉಪ್ಪಳ: ಹಲವು ಪ್ರಕರಣ ಗಳಲ್ಲಿ ಆರೋಪಿಯಾದ ಯುವಕನನ್ನು ಎಂಡಿಎಂಎ ಸಹಿತ ಸೆರೆಹಿಡಿಯ ಲಾಗಿದೆ. ಮೊರತ್ತಣೆ ಕಜೆಕ್ಕೋಡಿಯ ಮೊಹಮ್ಮದ್ ಅಸ್ಕರ್ (೨೬) ಎಂಬಾತನನ್ನು ಎಸ್‌ಐ ನಿಖಿಲ್ ನೇತೃ ತ್ವದ ಪೊಲೀಸರು ಸೆರೆಹಿಡಿದಿದ್ದಾರೆ.  ನಿನ್ನೆ ಸಂಜೆ ೬ ಗಂಟೆ ವೇಳೆ ಬಟ್ಯಪದವಿ ನಲ್ಲಿ ಸಂಶಯಾಸ್ಪದ ರೀತಿ ಯಲ್ಲಿ ಕಂಡುಬಂದ ಮೊಹಮ್ಮದ್ ಅಸ್ಕರ್ ನ ದೇಹ ತಪಾಸಣೆ ನಡೆಸಿದಾಗ  ೦.೪೨ ಗ್ರಾಂ ಎಂಡಿಎಂಎ ಪತ್ತೆಯಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಈ ಹಿಂದೆ ಮಾದಕವಸ್ತು ಹಾಗೂ ಹಲ್ಲೆ ಪ್ರಕರಣಗಳೂ ದಾಖಲಾಗಿ ಯೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page