ಎಂಡೋಸಲ್ಫಾನ್ ಸಂತ್ರಸ್ತರ ಮನೆಗಳಿಗೆ ಸಿಡಿಲು ಬಡಿದು ಹಾನಿ

ಕಾಸರಗೋಡು: ಪರಿಯಾರ ಸಮೀಪದ ಸಾಲೇಕ್ರಲ್ಲಿರುವ ಎಂಡೋಸಲ್ಫಾನ್ ಸಂತ್ರಸ್ತೆ ರಿಯಾ ಮತ್ತು ಅವರ ಕುಟುಂಬ ವಾಸಿಸುವ ಮನೆಗೆ ನಿನ್ನೆ ಸಿಡಿಲು ಬಡಿದಿದೆ.  ಮನೆ ಪಕ್ಕದ ತೆಂಗಿನ ಮರಕ್ಕೂ ಸಿಡಿಲು ಬಡಿದಿದ್ದು, ಅದರಿಂದ ಬೆಂಕಿ ಎದ್ದು ಮನೆಗೂ ತಗಲಿಕೊಂಡಿದೆ. ಮನೆಯ ಗೋಡೆಗಳು ಬಿರುಕುಬಿಟ್ಟಿದೆ.

ಇದರ ಹೊರತಾಗಿ ಸಾಲೇಕ್ರದ ರವಿ ಎಂಬವರ ಮತ್ತು ಕಲ್ಯೋ ಟ್‌ನ ಶೋಭಾ ಎಂಬವರ ಮನೆಗೂ ಸಿಡಿಲು ಬಡಿದಿದೆ.  ಸಿಡಿಲಿನ ಆಘಾತಕ್ಕೆ ಮನೆ ಗೋಡೆ ಗಳು ಬಿರುಕುಬಿಟ್ಟಿವೆ. ಮಾತ್ರವಲ್ಲ ಮನೆಯ ವಯರಿಂಗ್ ಉಪಕರ ಣಗಳು ಉರಿದುಹೋಗಿವೆ.

You cannot copy contents of this page