ಎಂಡೋಸಲ್ಫಾನ್ ಸಂತ್ರಸ್ತ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ
ಕಾಸರಗೋಡು: ಎಂಡೋಸ ಲ್ಫಾನ್ ಸಂತ್ರಸ್ತ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದ್ದಾರೆ. ರಾಜಪುರಂಗೆ ಸಮೀಪದ ಮಾಲಕಲ್ಲು ಪೂಕಯದ ಸಜಿ ಉಣ್ಣಂತ್ತರಪೇಲ್ (೫೨) ಸಾವನ್ನಪ್ಪಿದ ವ್ಯಕ್ತಿ. ಇವರು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದ ರೆಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂವರು ಮಕ್ಕಳ ತಂದೆಯಾಗಿರುವ ಇವರು ಮನೆ ಹಿತ್ತಿಲ ಮರದಲ್ಲಿ ಇಂದು ಬೆಳಿಗ್ಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಂ ಡೋಸಲ್ಫಾನ್ ಸಂತ್ರಸ್ತರಿಗಾಗಿರುವ ಐದು ಲಕ್ಷ ರೂ. ಧನ ಸಹಾಯ ಇವರಿಗೆ ಲಭಿಸಿರಲಿಲ್ಲವೆಂದು ಮನೆಯವರು ತಿಳಿಸಿದ್ದಾರೆ.