ಎಂ.ಆರ್. ಅಜಿತ್ ಕುಮಾರ್‌ರನ್ನು ಡಿಜಿಪಿಯಾಗಿ ನೇಮಿಸಲು ನಿರ್ಧಾರ

ತಿರುವನಂತಪುರ: ಆರೋಪ ವಿಧೇಯನಾಗಿ  ತನಿಖೆ ಎದುರಿಸು ತ್ತಿರುವ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಅವರನ್ನು ಡಿಜಿಪಿಯಾಗಿ ನೇಮಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಡಿಜಿಪಿ ಶೇಕ್ ದರ್ವೇಶ್ ಸಾಹೇಬ್ 2025 ಜುಲೈ 1ರಂದು ಸೇವೆಯಿಂದ ನಿವೃತ್ತಿಗೊಳ್ಳಲಿ ದ್ದಾರೆ.  ಆ ಹುದ್ದೆಗೆ  ಎಂ.ಆರ್. ಅಜಿತ್ ಕುಮಾರ್‌ರನ್ನು  ನೇಮಿಸಲಾ ಗುವುದು.  ವಿಜಿಲೆನ್ಸ್ ತನಿಖೆ  ಎದುರಿ ಸುತ್ತಿರುವ ವ್ಯಕ್ತಿಯನ್ನು  ಭಡ್ತಿಗೊಳಿಸಿ  ನೇಮಕಾತಿ ನಡೆಸುವುದಕ್ಕೆ  ಅಡ್ಡಿಯಿ ಲ್ಲವೆಂಬ ಮುಖ್ಯ ಕಾರ್ಯದರ್ಶಿಯ ಶಿಫಾರಸ್ಸಿನ ಮೇರೆಗೆ ಸಚಿವ ಸಂಪುಟ ಸಭೆ ಈ ತೀರ್ಮಾನ ಕೈಗೊಂಡಿದೆ.

Leave a Reply

Your email address will not be published. Required fields are marked *

You cannot copy content of this page