ಎಐಟಿಯುಸಿ ಜಿಲ್ಲಾಧಿಕಾರಿ ಕಚೇರಿ ಮಾರ್ಚ್

ಕಾಸರಗೋಡು: ರಾಜ್ಯದ ಸಾರ್ವಜನಿಕ ಸಂಸ್ಥೆಗಳಲ್ಲಿನ ನೀತಿಯಲ್ಲಿ ಬದಲಾವಣೆ ಉಂಟಾಗಬಾರದೆಂದು ಆಗ್ರಹಿಸಿ ಎಐಟಿಯುಸಿ ನೇತೃತ್ವದಲ್ಲಿ ಸಾರ್ವಜನಿಕ ಸಂಸ್ಥೆಗಳ ಸಂರಕ್ಷಣೆ ಮುಷ್ಕರದಂಗವಾಗಿ ಜಿಲ್ಲಾಧಿಕಾರಿ ಕಚೇರಿ ಮಾರ್ಚ್ ನಡೆಸಲಾಯಿತು. ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಕೆ.ವಿ.ಕೃಷ್ಣನ್ ಉದ್ಘಾಟಿಸಿದರು. ರಾಜ್ಯದ ಸಾರ್ವಜನಿಕ ಸಂಸ್ಥೆಗಳ ಸಂರಕ್ಷಣೆ ಸರಕಾರದ ಪ್ರಧಾನ ಪರಿಗಣನೆ ವಿಷಯವಾಗಿ ತೆಗೆದುಕೊಳ್ಳಬೇಕೆಂದು ಕೆ.ವಿ. ಕೃಷ್ಣನ್ ಆಗ್ರಹಿಸಿದರು. ಆದರೆ ಎಡರಂಗ ಸರಕಾರ ಈಗ ಈ ನಿಲುವಲ್ಲ ಸ್ವೀಕರಿಸಿರುವುದೆಂದು ಅವರು ನುಡಿದರು. ಎಐಟಿಯುಸಿ ಜಿಲ್ಲಾಧ್ಯಕ್ಷ ಟಿ. ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪದಾಧಿಕಾರಿಗಳಾದ ವಿ. ರಾಜನ್, ಪಿ. ವಿಜಯ ಕುಮಾರ್, ಎ. ಅಂಬುಂಞಿ, ಬಿಜು ಉಣ್ಣಿತ್ತಾನ್, ಎ. ದಾಮೋದರನ್, ಎಂ. ಕುಮಾರನ್, ವಿವಿಧ ಯೂನಿಯನ್ ಪ್ರತಿನಿಧಿಗಳಾದ ಸದರಿಯಾಸ್, ಶಿಬಾ, ರಮೇಶ್ ಕಾರ್ಯಾಂಗೋಡು, ರಾಮಕೃಷ್ಣ ಕಡಂಬಾರು, ಸಿ.ವಿ. ಬಾಬುರಾಜ್, ರಾಘವನ್, ಶ್ರೀಜೇಶ್, ಗೋವಿಂದನ್ ಪಳ್ಳಿಕಾಪಿಲ್ ಮಾತನಾಡಿದರು.

Leave a Reply

Your email address will not be published. Required fields are marked *

You cannot copy content of this page