ಎಡನೀರು ಮಠಕ್ಕೆ ಶೃಂಗೇರಿ ಶ್ರೀಗಳ ಭೇಟಿ 28ರಂದು

ಎಡನೀರು: ಶೃಂಗೇರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಈ ತಿಂಗಳ ೨೮ರಂದು ಸಂಜೆ ೬ ಗಂಟೆಗೆ ಎಡನೀರು ಮಠಕ್ಕೆ ಚಿತ್ತೈಸುವರು. ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿದರು. ಮೆನೇಜರ್ ರಾಜೇಂದ್ರ ಕಲ್ಲೂರಾಯ ಪ್ರಸ್ತಾಪಿಸಿದರು. ಮುರಳಿ ತಂತ್ರಿ ಕುಂಟಾರು, ಶಿವರಾಂ ಭಟ್ ಪೆರಡಾಲ, ವೆಂಕಟಕೃಷ್ಣ ಭಟ್, ವೇಣುಗೋಪಾಲ ಮಾಸ್ತರ್, ಭವಾನಿಶಂಕರ, ಸೂರ್ಯಭಟ್, ಉಮೇಶ್ ಎಡನೀರು, ಕಮಲಾಕ್ಷ ಎಡನೀರು, ಮಹೇಶ್ ವಳಕುಂಜ, ಗಣೇಶ್ ಭಟ್ ಅಳಕೆ, ಸಿ.ಎಚ್. ಗೋಪಾಲ ಭಟ್, ವಿಜಯ ಕುಮಾರ್, ತೇಜಸ್ವಿ ಹೇರಳ, ಈಶ್ವರ ಭಟ್, ಗಣೇಶ್ ಭಟ್ ಕುಂಜರಕಾನ, ಸುಬ್ರಹ್ಮಣ್ಯ ಹೊಳ್ಳ, ಸತೀಶ್ ಎಡನೀರು ಭಾಗವಹಿಸಿದರು.

Leave a Reply

Your email address will not be published. Required fields are marked *

You cannot copy content of this page