ಎಡನೀರು ಸ್ವಾಮೀಜಿಯವರ ಕಾರಿಗೆ ಹಾನಿ : ಬದಿಯಡ್ಕದಲ್ಲಿ ಬೃಹತ್ ಪ್ರತಿಭಟನೆ
ಬದಿಯಡ್ಕ: ಹಿಂದೂ ಧಾರ್ಮಿಕ ಶ್ರದ್ಧಾಕೇಂದ್ರಗಳು, ಸಾಧು ಸಂತರು, ಸನ್ಯಾಸಿಗಳು ಹಾಗೂ ಹಿಂದೂ ಸಮಾ ಜದ ಮಠ ಮಂದಿರ ದೇವಸ್ಥಾನಗಳ ಮೇಲೆ ನಿರಂತರ ದಾಳಿಗಳು ನಡೆಯು ತ್ತಿದೆ. ಹಿಂದೂಗಳ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಕೇರಳ ಸರಕಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲೇ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯ ವಾಹನದ ಮೇಲೆ ಆಕ್ರಮಣ ನಡೆಸಿರುವುದು ಖಂಡನೀಯವಾಗಿದ್ದು, ದುಷ್ಕರ್ಮಿಗಳ ಪತ್ತೆಗೆ ಅಧಿಕಾರಿಗಳು ಮುಂದಾಗದಿರುವುದು ಅಕ್ಷಮ್ಯ ಎಂದು ಸಾಮಾಜಿಕ ಮುಂದಾಳು ಪಿ.ಆರ್. ಸುನಿಲ್ ನುಡಿದರು.
ಎಡನೀರು ಮಠಾಧೀಶರ ವಾಹನದ ಮೇಲೆ ನಡೆದ ಆಕ್ರಮಣ ಖಂಡಿಸಿ ವಿಶ್ವಹಿಂದೂ ಪರಿಷತ್ ನಿನ್ನೆ ಸಂಜೆ ೬ ಗಂಟೆಗೆ ಬದಿಯಡ್ಕ ಪೇಟೆಯಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭಯಲ್ಲಿ ಅವರು ಮಾತನಾಡಿದರು. ಪ್ರಜಾಪ್ರಭುತ್ವದ ಕಾವಲುಗಾರರೆಂದು ಸ್ವಯಂ ಘೋಷಿಸಿ ಕೊಂಡು ಕೇರಳದ ಆಡಳಿತ ಚುಕ್ಕಾಣಿ ಹಿಡಿದಿರುವವರೇ ಅನ್ಯಾಯ-ಅಕ್ರಮದ ಹಾದಿ ಹಿಡಿದು ಸಾಮಾಜಿಕ ಅಶಾಂತಿಗೆ ತೊಡಗಿಕೊಂಡಿದ್ದಾರೆ. ಕೇರಳದಾದ್ಯಂತ ಮಹತ್ತರ ಸ್ಥಾನ ಹೊಂದಿರುವ ಎಡನೀರು ಶ್ರೀಗಳಿಗೆ ರಕ್ಷಣೆಯೊದಗಿಸಬೇಕಾ ದವರೇ ಆಕ್ರಮಣವನ್ನು ಮರೆಮಾಚಲು ಹವಣಿಸಿದ್ದು ನಾಚಿಕೆಗೇಡು. ೧೨೦೦ ವರ್ಷಗಳ ಇತಿಹಾಸವಿರುವ ಎಡನೀರು ಮಠದ ಮಠಾಧೀಶರಿಗಾದ ಅವಮಾನ ಮತ್ತು ಭೀತಿ ಸೃಷ್ಟಿ ಕಳವಳಕಾರಿ. ಪೊಲೀಸ್ ಅಧಿಕಾರಿಗಳು ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಎಚ್ಚರಿಸಿದರು.
ವಿಶ್ವಹಿಂದೂ ಪರಿಷತ್ ಕೇರಳ ಪ್ರಾಂತ್ಯ ಸತ್ಸಂಗ ಸಹ ಸಂಯೋಜಕ ಸಂಕಪ್ಪ ಭಂಡಾರಿ ಬೆಳ್ಳಂಬೆಟ್ಟು ಅಧ್ಯಕ್ಷೆ ವಹಿಸಿದರು. ಸುಧಾಮ ಗೋಸಾಡ, ಹರಿಪ್ರಸಾದ್ ಪುತ್ರಕಳ, ಸುನಿಲ್ ಕಿನ್ನಿಮಾಣಿ, ಮಂಜುನಾಥ ಮಾನ್ಯ, ರೋಹಿತಾಕ್ಷ ಬದಿಯಡ್ಕ ಪ್ರತಿಭಟನೆಗೆ ನೇತೃತ್ವ ನೀಡಿದರು. ವಿಶ್ವಹಿಂದೂ ಪರಿಷತ್‌ನ ಹಾಗೂ ವಿವಿಧ ಸಂಘ ಪರಿವಾರ ಸಂಘಟ ನೆಗಳ ನೇತಾರರುಗಳು, ಕಾರ್ಯಕರ್ತ ರುಗಳು ಹಾಗೂ ಹಿತೈಷಿಗಳು ಪಾಲ್ಗೊಂಡರು. ವಿಶ್ವಹಿಂದೂ ಪರಿಷತ್‌ನ ಬದಿಯಡ್ಕ ಪ್ರಖಂಡ ಕಾರ್ಯದರ್ಶಿ ರಮೇಶ್‌ಕೃಷ್ಣ ಪದ್ಮಾರು ಸ್ವಾಗತಿಸಿ, ಜಿಲ್ಲಾ ಸಹ ಕಾರ್ಯದರ್ಶಿ ಗಣೇಶ ಮಾವಿನಕಟ್ಟೆ ವಂದಿಸಿದರು.