ಎನ್‌ಡಿಎ-ಇಂಡಿಯಾ ಮಧ್ಯೆ ಬಿಗ್ ಫೈಟ್

ನವದೆಹಲಿ: ಲೋಕಸಭಾ ಚುನಾವಣೆಯ   ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ವಿಪಕ್ಷಗಳ ಒಕ್ಕೂಟ ಇಂಡಿಯಾ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ. ಬಿಜೆಪಿಯ ಭದ್ರ ಕೋಟೆ ಎಂದೇ ಹೇಳಲಾಗುತ್ತಿರುವ  ಉತ್ತರಪ್ರದೇ ಶದಲ್ಲಿ  ಬಿಜೆಪಿಗೆ ನಿರೀಕ್ಷಿಸಿದಷ್ಟು ಸೀಟುಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಮತದಾನದ ಆರಂಭಿಕ ಹಂತದಲ್ಲಿ ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಯವರು ಹಿನ್ನಡೆಯಲ್ಲಿದ್ದರು.  ಆ ಬಳಿಕ ಅವರು ಕ್ರಮೇಣ ಮುನ್ನಡೆ ಸಾಧಿಸತೊಡಗಿದರು. ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ರಾಯ್ ಬರೇಲಿ ಮತ್ತು ವಯನಾಡು ಲೋಕಸಭಾ ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿದ್ದಾರೆ. ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿ 2 ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆಯಲ್ಲಿದ್ದಾರೆ.

ಉತ್ತರಪ್ರದೇಶದಲ್ಲಿ ಇಂಡಿಯಾ ಒಕ್ಕೂಟ ಎನ್‌ಡಿಎಗಿಂತಲೂ ಈಗ ಮುನ್ನಡೆ ಸಾಧಿಸುತ್ತಿದ್ದು, ಇದುವೇ ಎನ್‌ಡಿಎಗೆ ನಿರೀಕ್ಷಿತ ಮಟ್ಟಕ್ಕೇರಲು ಸಾಧ್ಯವಾಗದೇ ಇರುವುದರ ಪ್ರಧಾನ ಕಾರಣವಾಗಿದೆ.

ದೇಶದ ಒಟ್ಟು 543 ಲೋಕಸಭಾ ಕ್ಷೇತ್ರಗಳ ಪೈಕಿ ಎನ್‌ಡಿಎ 298, ಐಎನ್‌ಡಿಐಎ 225, ಇತರರು 20 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page