ಎನ್‌ಡಿಎ ನೇತೃತ್ವದ ಕೇರಳ ಪಾದಯಾತ್ರೆಗೆ ಕ್ಷಣಗಣನೆ ಆರಂಭ
ಕಾಸರಗೋಡು:? ಎನ್.ಡಿ.ಎ ಕೇರಳ ಘಟಕದ ಅಧ್ಯಕ್ಷ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೆ. ಸುರೇಂದ್ರನ್‌ರ ನೇತೃತ್ವದಲ್ಲಿ ಕಾಸರಗೋಡಿನಿಂದ ಆರಂಭಗೊ ಳ್ಳುವ ಕೇರಳ ಪಾದಯಾತ್ರೆಗೆ ಕ್ಷಣಗಣನೆ ಆರಂಭಗೊಂಡಿದೆ.
ನಿಗದಿತ ತೀರ್ಮಾನದಂತೆ ಇಂದಿನ ಈ ಯಾತ್ರೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಉದ್ಘಾಟಿ ಸಬೇಕಾಗಿತ್ತು. ಆದರೆ ಬಿಹಾರದಲ್ಲಿ ದಿಢೀರ್ ಆಗಿ ಉಂಟಾದ ರಾಜಕೀಯ ಹೈಡ್ರಾಮಾ ಬೆಳವಣಿಗೆ ಹಿನ್ನೆಲೆಯಲ್ಲಿ ಜೆ.ಪಿ. ನಡ್ಡಾ ತಮ್ಮ ಕಾಸರಗೋಡು ಯಾತ್ರೆಯನ್ನು ದಿಢೀರ್ ರದ್ದುಪಡಿಸಿ ಅವರಿಗೆ ದಿಲ್ಲಿಯಲ್ಲೇ ಉಳಿದುಕೊಳ್ಳ ಬೇಕಾದ ಅನಿವಾರ್ಯತೆಯುಂಟಾಗಿದೆ. ಅದರಿಂದಾಗಿ ಅವರು ಇಂದಿನ ಕೇರಳ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ. ಅವರ ಬದಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಇಂದು ಕೇರಳ ಯಾತ್ರೆಯನ್ನು ಉದ್ಘಾಟಿಸುವರು. ಅದಕ್ಕಾಗಿ ಅವರು ಇಂದು ಬೆಳಿಗ್ಗೆಯೇ ಇಂದು ಬೆಳಿಗ್ಗೆಯೇ ಕಾಸರಗೋಡಿಗೆ ಆಗಮಿಸಿದ್ದು ಮಧ್ಯಾಹ್ನ ಎಡನೀರು ಮಠಕ್ಕೆ ಭೇಟಿನೀಡಿ ಎಡನೀರು ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರನ್ನೂ ಸಂದರ್ಶಿಸುವರು.
ಎನ್‌ಡಿಎ ಪಾದಯಾತ್ರೆಯಲ್ಲಿ ಎನ್‌ಡಿಎಯ ಎಂಟು ಘಟಕ ಪಕ್ಷಗಳ ಪಕ್ಷಗಳ ನೇತಾರರು ಭಾಗವಹಿಸುವರು. ತುಷಾರ್ ವೆಳ್ಳಾಪಳ್ಳಿ, ಸಿ.ಕೆ.ಜಾನು ಮೊದಲಾದ ನೇತಾರರು ಸೇರಿದಂತೆ ಇತರ ಹಲವರು ಇದರಲ್ಲಿ ಭಾಗವಹಿಸುವರು. ಕೇರಳ ಪಾದಯಾತ್ರೆ ಅಪರಾಹ್ನ ೩ ಗಂಟೆಗೆ ಕಾಸರಗೋಡು ತಾಳಿಪಡ್ಪು ಮೈದಾನದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಉದ್ಘಾಟಿಸಿದ ಬಳಿಕ ಪ್ರಯಾಣ ಆರಂಭಗೊಳ್ಳಲಿದೆ. ಇಂದಿನ ಪಾದಯಾತ್ರೆ ಬಳಿಕ ಮೇಲ್ಪರಂಭದಲ್ಲಿ ಕೊನೆಗೊಳ್ಳಲಿದೆ. ನಂತರ ಅಲ್ಲಿಂದ ಯಾತ್ರೆ ನಾಳೆ ಪುನರಾರಂಭ ಗೊಳ್ಳಲಿದೆ. ರಾಜ್ಯದ ಎಲ್ಲಾ ೨೦ ಲೋಕಸಭಾ ಕ್ಷೇತ್ರಗಳಲ್ಲಿ ಯಾತ್ರೆ ಪರ್ಯಟನೆ ನಡೆಸಿ ಫೆ.೭ರಂದು ಪಾಲ್ಘಾಟ್‌ನಲ್ಲಿ ಮುಕ್ತಾಯಗೊಳ್ಳಲಿದೆ.
ಪಾದಯಾತ್ರೆಯ ಅಂಗವಾಗಿ ಇಡೀ ಕಾಸರಗೋಡು ನಗರವನ್ನು ಮಾತ್ರವಲ್ಲ ಅದು ಹಾದುಹೋಗುವ ದಾರಿಗಳನ್ನು ಬಿಜೆಪಿ ಪತಾಕೆಗಳು, ಬ್ಯಾನರ್‌ಗಳು ಮತ್ತು ಕೇಸರಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.