ಎನ್.ಡಿ.ಎ. ಚುನಾವಣಾ ಪ್ರಚಾರ ಇಂದು ಮಂಜೇಶ್ವರ ಮಂಡಲದಲ್ಲಿ: ಮೊರತ್ತಣೆಯಿಂದ ಆರಂಭ
ಮಂಜೇಶ್ವರ: ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಅವರ ಚುನಾವಣಾ ಪ್ರಚಾರಕಾರ್ಯಕ್ಕೆ ಇಂದು ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು. ಇಂದು ಬೆಳಿಗ್ಗೆ ಮೊರತ್ತಣೆಯಿಂದ ಆರಂಭಗೊಂಡ ಪ್ರಚಾರ ಕಾರ್ಯವನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ ಉದ್ಘಾಟಿಸಿದರು. ಮಂಜೇಶ್ವರ ಮಂಡಲ ಚುನಾವಣಾ ಸಮಿತಿ ಸಂಚಾಲಕ ಗೋಪಾಲ ಶೆಟ್ಟಿ ಅರಿಬೈಲು, ನೇತಾರರಾದ ಆದರ್ಶ್ ಬಿ.ಎಂ, ವಸಂತ ಕುಮಾರ್ ಮಯ್ಯ, ಸುನಿಲ್ ಕುಮಾರ್, ಬಾಲಕೃಷ್ಣ ಶೆಟ್ಟಿ, ನವೀನ್ರಾಜ್, ಪದ್ಮನಾಭ ಕಡಪ್ಪುರ, ಕೋಳಾರಿ ಸತೀಶ್ಚಂದ್ರ ಭಂಡಾರಿ, ಮಣಿಕಂಠ ರೈ, ಪಂಚಾಯತ್ ಸಮಿತಿ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು.
ಪರ್ಯಟನೆ ಬಳಿಕ ಮಜೀರ್ಪಳ್ಳ, ಮಂಜೇಶ್ವರ ರೈಲ್ವೇ, ಕಣ್ವತೀರ್ಥ, ತೂಮಿ ನಾಡು, ಚೌಕಾರು ಬೆಜ್ಜ, ಮೀಯಪದವು, ಪೈವಳಿಕೆ, ಮುಳಿಗದ್ದೆ, ಪೆರ್ಮುದೆ, ಬಾಡೂರು, ಮಣಿಯಂ ಪಾರೆ, ಪೆರ್ಲ, ಪಳ್ಳಂ, ಸೀತಾಂಗೋಳಿ, ನಾಯ್ಕಾಪು, ಕಳತ್ತೂರು, ಬಂಬ್ರಾಣ ಎಂಬೆಡೆಗಳಲ್ಲಿ ಸಂಚರಿಸಿದ ಬಳಿಕ ಕುಂಬಳೆಯಲ್ಲಿ ಸಮಾಪ್ತಿ ಹೊಂದಲಿದೆ. ಪರ್ಯಟನೆ ನಿನ್ನೆ ಪಯ್ಯ ನ್ನೂರು ಮಂಡಲದ ವಿವಿಧೆಡೆ ನಡೆಯಿತು.